ಸ್ಫೋಟದ ತನಿಖೆಗೆ ಎನ್‌ಎಸ್‌ಜಿ ಎಂಟ್ರಿ: ಘಟನಾ ಸ್ಥಳಕ್ಕೆ 'ಪೋಸ್ಟ್-ಬ್ಲಾಸ್ಟ್' ತಜ್ಞರ ತಂಡ
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಸ್ಫೋಟದ ತನಿಖೆಗಾಗಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (NSG) ವಿಶೇಷ 'ಪೋಸ್ಟ್-ಬ್ಲಾಸ್ಟ್ ಇನ್ವೆಸ್ಟಿಗೇಷನ್' (ಸ್ಫೋಟೋತ್ತರ ತನಿಖೆ) ಘಟಕವು ಘಟನಾ ಸ್ಥಳಕ್ಕೆ ಧಾವಿಸುತ್ತಿದೆ. ಸ್ಫೋಟಕ್ಕೆ ಕಾರಣವಾದ ವಸ್ತುಗಳ ಕುರುಹುಗಳನ್ನು ಸಂಗ್ರಹಿಸಿ, ಘಟನೆಯ ಬಗ್ಗೆ ಆಳವಾದ ತನಿಖೆ ನಡೆಸುವುದು ಈ ತಜ್ಞರ ತಂಡದ ಉದ್ದೇಶವಾಗಿದೆ. ತಂಡವು ಶೀಘ್ರದಲ್ಲೇ ಸ್ಥಳವನ್ನು ತಲುಪಲಿದ್ದು, ಸ್ಫೋಟದ ಸ್ವರೂಪ ಮತ್ತು ಬಳಸಲಾದ ಸ್ಫೋಟಕದ ಬಗ್ಗೆ ನಿಖರವಾದ ಮಾಹಿತಿಯನ್ನು ಕಲೆಹಾಕುವ ಮೂಲಕ, ತನಿಖೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.
Next Story

