ಕೆಂಪು ಸಿಗ್ನಲ್‌ನಲ್ಲಿ ನಿಂತಿದ್ದ ಕಾರು ಸ್ಫೋಟ: ಪೊಲೀಸ್ ಆಯುಕ್ತರಿಂದ ಮೊದಲ ಅಧಿಕೃತ ಹೇಳಿಕೆ
ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಸ್ಫೋಟದ ಬಗ್ಗೆ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಅವರು ಮೊದಲ ಅಧಿಕೃತ ಹೇಳಿಕೆ ನೀಡಿದ್ದಾರೆ. "ಸಂಜೆ ಸುಮಾರು 6:52ರ ಹೊತ್ತಿಗೆ, ಕೆಂಪುಕೋಟೆಯ ಬಳಿಯ ಕೆಂಪು ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ನಿಂತಿದೆ. ಅದು ನಿಂತ ಕೆಲವೇ ಕ್ಷಣಗಳಲ್ಲಿ, ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಹಲವು ವಾಹನಗಳಿಗೆ ಹಾನಿಯಾಗಿದೆ," ಎಂದು ಅವರು ತಿಳಿಸಿದ್ದಾರೆ. ದೆಹಲಿ ಪೊಲೀಸ್‌ನ ಅಪರಾಧ ವಿಭಾಗದ ತಂಡವು (Crime Branch) ಘಟನಾ ಸ್ಥಳದಲ್ಲಿದ್ದು, ವಿವಿಧ ಏಜೆನ್ಸಿಗಳೊಂದಿಗೆ ಜಂಟಿಯಾಗಿ ತನಿಖೆ ನಡೆಸುತ್ತಿದೆ ಎಂದು ಗೋಲ್ಚಾ ಅವರು ಸ್ಪಷ್ಟಪಡಿಸಿದ್ದಾರೆ.
Next Story

