ವಿಮಾನ ದುರಂತ: 45 ವೈದ್ಯಕೀಯ ವಿದ್ಯಾರ್ಥಿಗಳು ಅಪಾಯದಿಂದ ಪಾರು


ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ (AI-171) ವಿಮಾನ ವೈದ್ಯಕೀಯ ವಸತಿ ನಿಲಯಕ್ಕೆ ಅಪ್ಪಳಿಸಿ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ನಾವು 4 ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಪತ್ನಿಯನ್ನು ಕಳೆದುಕೊಂಡಿದ್ದೇವೆ. ಆದರೆ ಅದೃಷ್ಟವಶಾತ್, ಹಾಸ್ಟೆಲ್ ಪ್ರದೇಶದಲ್ಲಿ 45 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನು ಉಳಿಸಿದ್ದೇವೆ ಎಂದು ಐಎಂಎ ಅಧ್ಯಕ್ಷ ಡಾ. ಮೆಹುಲ್ ಶಾ ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿರುವ ಗಾಯಾಳುಗಳ ಆರೋಗ್ಯ ನಿಗಾವಹಿಸಲು 100 ಕ್ಕೂ ಹೆಚ್ಚು ವೈದ್ಯರು ಆಸ್ಪತ್ರೆ ತಲುಪಿದ್ದಾರೆ. ನಾವು ಸಿಎಂ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಘವಿ, ಆರೋಗ್ಯ ಕಾರ್ಯದರ್ಶಿ ಧನಂಜಯ್ ದ್ವಿವೇದಿ ಮತ್ತು ಬಿ.ಜೆ. ವೈದ್ಯಕೀಯ ಸಿವಿಲ್ ಆಸ್ಪತ್ರೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಈ ದುರದೃಷ್ಟಕರ ಘಟನೆಯ ನಡುವೆ ನಾವು ಕೈಜೋಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

Read More
Next Story