ವಿಮಾನ ದುರಂತ: ಸಂತಾಪ ಸೂಚಿಸಿ ಸಿಂಗಪುರ ಪ್ರಧಾನಿ ಲ್ಯಾವರೆನ್ಸ್ ವಾಂಗ್ ಪತ್ರ


 

ಅಹಮದಾಬಾದ್‌ನಲ್ಲಿ ಗುರುವಾರ(ಜೂ.12) ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸಿಂಗಪುರ ಪ್ರಧಾನಿ ಲ್ಯಾವರೆನ್ಸ್ ವಾಂಗ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

"ಜೂನ್ 12ರಂದು ನಡೆದ ಏರ್ ಇಂಡಿಯಾ ಎಐ171 ವಿಮಾನ ಅಪಘಾತದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸಿಂಗಪುರ ಸರ್ಕಾರದ ಪರವಾಗಿ, ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಹಾಗೂ ಅವರ ಕುಟುಂಬದವರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇವೆ. ದುಃಖದ ಸಮಯದಲ್ಲಿ ಭಾರತದ ಜತೆಗೆ ಸಿಂಗಪುರವಿರಲಿದೆʼʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story