ಬೆಚ್ಚಿಬೀಳಿಸಿದ ಉಡುಪಿಯ ಗ್ಯಾಂಗ್‌ವಾರ್
ಕರಾವಳಿ ಜಿಲ್ಲೆ ಉಡುಪಿಯಲ್ಲಿ ರೌಡಿಗಳ ಎರಡು ಗ್ಯಾಂಗ್ ಸಿನಿಮಾ ರೀತಿಯಲ್ಲಿ ಹೊಡೆದಾಡಿಕೊಂಡಿದ್ದು, ಕಾರಿನಿಂದ ಇನ್ನೊಂದು ಕಾರಿಗೆ ಗುದ್ದಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಅಲ್ಲದೆ ಎದುರಾಳಿಗಳನ್ನು ಚೇಸ್ ಮಾಡಿ ಹೊಡೆದುರುರಳಿಸಿದ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ. ಈ ಘಟನೆ ಉಡುಪಿ -ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಕುಂಜಿಬೆಟ್ಟು ಜಂಕ್ಷನ್‌ನಲ್ಲಿ ರಾತ್ರಿ ಈ ಘಟನೆ ನಡೆದಿದ್ದು, ಹತ್ತಿರದ ಕಟ್ಟಡದ ನಿವಾಸಿಯೊಬ್ಬರು ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ ೧೮ ರಂದು ಈ ಘಟನೆ ನಡೆದಿದ್ದು, ಬಳಿಕ ಎಚ್ಚೆತ್ತ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.;
By : Keerthik
Update: 2024-05-25 14:03 GMT