LIVE | ಡೋಲು, ಡ್ಯಾನ್ಸ್, ಜೈಕಾರ: ಬಿಹಾರ ಗೆಲುವನ್ನು ಕುಣಿದು ಸಂಭ್ರಮಿಸಿದ ಬಿಜೆಪಿ ನಾಯಕರು!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತದತ್ತ ಸಾಗುತ್ತಿದ್ದಂತೆ, ಅದರ ಸಂಭ್ರಮದ ಅಲೆ ಕರ್ನಾಟಕಕ್ಕೂ ಅಪ್ಪಳಿಸಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು ಮತ್ತು ನಾಯಕರು ಒಟ್ಟಿಗೆ ಸೇರಿ ವಿಜಯೋತ್ಸವ ಆಚರಿಸಿದರು. ಪಕ್ಷದ ಕಚೇರಿಯ ಮುಂದೆ ಪಟಾಕಿಗಳನ್ನು ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪರವಾಗಿ ಜಯಘೋಷಗಳನ್ನು ಕೂಗುತ್ತಾ, ಕಾರ್ಯಕರ್ತರು ಮತ್ತು ನಾಯಕರು ಕುಣಿದು ಕುಪ್ಪಳಿಸಿದರು. ಬಿಹಾರದ ಜನತೆ ಅಭಿವೃದ್ಧಿಗೆ ಮತ ನೀಡಿದ್ದಾರೆ ಮತ್ತು 'ಜಂಗಲ್ ರಾಜ್' ಅನ್ನು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದರು.
By : The Federal
Update: 2025-11-14 08:33 GMT