Z-Morh tunnel : ಜಮ್ಮು ಮತ್ತು ಕಾಶ್ಮೀರದಲ್ಲಿ ಜಡ್-ಮೋರ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

Z-Morh tunnel : ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ನಂತರ, ಇದು ಪ್ರಧಾನಮಂತ್ರಿಯವರ ಮೊದಲ ಜಮ್ಮು- ಕಾಶ್ಮೀರ ಭೇಟಿಯಾಗಿದೆ. ಹೀಗಾಗಿ ಹೆಚ್ಚಿನ ಮಹತ್ವ ಹೊಂದಿದೆ;

Update: 2025-01-13 10:41 GMT
ಸುರಂಗ ಮಾರ್ಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ.

ಜಮ್ಮು ಮತ್ತು ಕಾಶ್ಮೀರದ ಸೋನಮಾರ್ಗ್ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಜಡ್-ಮೋರ್ ಸುರಂಗ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. ಹೊಸ ಸುರಂಗ ಮಾರ್ಗದಿಂದಾಗಿ ಪ್ರವಾಸಿಗರು ವರ್ಷದ ಎಲ್ಲ ಋತುಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಸಾಧ್ಯವಾಗಲಿದೆ.

ಪ್ರಧಾನಮಂತ್ರಿ ಅವರು ₹2,700 ಕೋಟಿ ವೆಚ್ಚದ ಈ ಮಹತ್ವದ ಯೋಜನೆಯನ್ನು ಉದ್ಘಾಟಿಸಿದ ನಂತರ, ಸುರಂಗದ ಮೂಲಕ ಪ್ರಯಾಣಿಸಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಅದೇ ರೀತಿ ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡಿದ್ದ ನಿರ್ಮಾಣ ಕಾರ್ಮಿಕರನ್ನು ಭೇಟಿ ಮಾಡಿ ಶ್ಲಾಘಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಗ್ ಮತ್ತು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ಬೆಳಿಗ್ಗೆ 10:45ಕ್ಕೆ ಶ್ರೀನಗರಕ್ಕೆ ಆಗಮಿಸಿ, ನಂತರ ಸೋನಮಾರ್ಗ್‌ಗೆ ವಾಯುಮಾರ್ಗಕ್ಕೆ ತಲುಪಿಸಿದರು.ಬಳಿಕ ಸುರಂಗ ಮಾರ್ಗ ಉದ್ಘಾಟನೆ ನಡೆಸಿದರು.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ನಂತರ, ಇದು ಪ್ರಧಾನಮಂತ್ರಿಯವರ ಮೊದಲ ಜಮ್ಮು- ಕಾಶ್ಮೀರ ಭೇಟಿಯಾಗಿದೆ. ಹೀಗಾಗಿ ಹೆಚ್ಚಿನ ಮಹತ್ವ ಹೊಂದಿದೆ.

6.5 ಕಿ.ಮೀ. ಉದ್ದದ ಎರಡು-ಮಾರ್ಗದ ರಸ್ತೆ ಸುರಂಗ ಮಾರ್ಗ ಗಗಂಗೀರ್ ಮತ್ತು ಸೋನಮಾರ್ಗ್ ನಡುವೆ ನಿರ್ಮಾಣಗೊಂಡಿದೆ. ಇದು ಕಾಶ್ಮೀರದ ಗಂದರ್ಬಾಲ್‌ ಜಿಲ್ಲೆಯಲ್ಲಿದೆ. ತುರ್ತು ಪರಿಸ್ಥಿತಿಗಾಗಿ 7.5 ಮೀಟರ್ ಉದ್ದದ ಪರ್ಯಾಯ ದಾರಿಯನ್ನೂ ನಿರ್ಮಿಸಲಾಗಿದೆ.

ಸಮುದ್ರಮಟ್ಟದಿಂದ 8,650 ಅಡಿ ಎತ್ತರದಲ್ಲಿರುವ ಈ ಸುರಂಗ , ಶ್ರೀನಗರ ಮತ್ತು ಸೋನಮಾರ್ಗ್ ನಡುವಿನ ಸಂಚಾರ ಸಮಸ್ಯೆಯನ್ನು ನಿಭಾಯಿಸಲಿದೆ. ಯಾವುದೇ ಹವಾಮಾನದಲ್ಲಿ ನಿರ್ಭೀತ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಹಿಮಪಾತ ಮತ್ತು ಗುಡ್ಡ ಜಾರುವಿಕೆಯ ನಡುವೆಯೂ ಲೇಹ್ ಕಡೆಗೆ ದಾರಿಯನ್ನು ಸುಲಭಗೊಳಿಸುತ್ತದೆ.

Tags:    

Similar News