ಆಪ್‌ನ ಮಾಜಿ ಶಾಸಕ ಸುಖಬೀರ್ ಸಿಂಗ್ ದಲಾಲ್ ಬಿಜೆಪಿ ಸೇರ್ಪಡೆ

ದಲಾಲ್ ಅವರ ಜೊತೆಯಲ್ಲಿ, ಆರು ಬಾರಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್‌ಮೆಂಟ್ ಕಮಿಟಿಯ ಸದಸ್ಯರಾಗಿದ್ದ ಸರ್ದಾರ್ ಬಲ್ಬೀರ್ ಸಿಂಗ್ ಕೂಡ ಬಿಜೆಪಿ ಸೇರಿದ್ದಾರೆ. ಅವರು ದೆಹಲಿ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ..

Update: 2024-12-21 11:01 GMT
ಬಿಜೆಪಿಗೆ ದಲಾಲ್‌ ಹಾಗೂ ಬಲ್ಬೀರ್‌ ಸಿಂಗ್‌

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ, ಆಮ್ ಆದ್ಮಿ ಪಕ್ಷ (AAP)ದ ಮಾಜಿ ಶಾಸಕ ಸುಖಬೀರ್ ಸಿಂಗ್ ದಲಾಲ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಮುಂಡ್ಕಾ ಕ್ಷೇತ್ರದ ಮಾಜಿ ಶಾಸಕರಾದ ದಲಾಲ್ ಅವರು ದೆಹಲಿ ಬಿಜೆಪಿ ಕಚೇರಿಯಲ್ಲಿ, ಪಕ್ಷದ ದೆಹಲಿ ಘಟಕದ ಮುಖ್ಯಸ್ಥರಾದ ವೀರೇಂದ್ರ ಸಚ್ಚದೇವಾ, ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ಮತ್ತು ಬಿಜೆಪಿ ನಾಯಕ ಆಶಿಷ್ ಸೂದ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ದಲಾಲ್ ಅವರ ಜೊತೆಯಲ್ಲಿ, ಆರು ಬಾರಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್‌ಮೆಂಟ್ ಕಮಿಟಿಯ ಸದಸ್ಯರಾಗಿದ್ದ ಸರ್ದಾರ್ ಬಲ್ಬೀರ್ ಸಿಂಗ್ ಕೂಡ ಬಿಜೆಪಿ ಸೇರಿದ್ದಾರೆ. ಅವರು ದೆಹಲಿ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ..

ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ದಲಾಲ್. ಆಪ್‌ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ತಾವು ಶಾಸಕನಾಗಿ ಅಧಿಕಾರದಲ್ಲಿದ್ದಾಗ ಪ್ರಾರಂಭಿಸಿದ ಕ್ರೀಡಾ ವಿಶ್ವವಿದ್ಯಾಲಯ ಯೋಜನೆ ವರ್ಷಗಳು ಕಳೆದರೂ ಪ್ರಗತಿಯಿಲ್ಲದೆ ಬಾಕಿಯೇ ಉಳಿದಿದೆ ಎಂದು ಆರೋಪಿಸಿದರು. ಆಪ್‌ ತನ್ನ ಭ್ರಷ್ಟಾಚಾರ ವಿರೋಧಿ ನಿಲುವಿನಿಂದ ಹೊರಬಂದಿದೆ ಎಂದು ಹೇಳಿದ ಅವರು ದೆಹಲಿಯ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಹೊಗಳಿದರು.

ದೆಹಲಿ ಬಿಜೆಪಿ ಅಧ್ಯಕ್ಷ ಸಚ್ಚದೇವಾ ಮಾತನಾಡಿ, ಆಪ್‌ ಕ್ರೀಡಾ ವಿಶ್ವವಿದ್ಯಾಲಯ ಯೋಜನೆಯ ಬಗ್ಗೆ ಸುಳ್ಳು ಭರವಸೆ ಕೊಟ್ಟಿದೆಯೆಂದು ಟೀಕಿಸಿದರು. ನಿಗಮಗಳನ್ನು ಕಾಗದದಲ್ಲಿ ಮಾತ್ರ ರಚಿಸಲಾಗಿದ್ದು ಯಾವುದೇ ಪ್ರಗತಿ ಕಂಡಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ತಾನು ಆರಂಭಿಸಿದ ಯೋಜನೆಗಳನ್ನು ತಕ್ಷಣದಲ್ಲಿಯೇ ಪೂರ್ಣಗೊಳಿಸಿದೆ ಎಂದು ಹೇಳಿದರು.

ದಲಾಲ್ ಮತ್ತು ಬಲ್ಬೀರ್ ಸಿಂಗ್ ಅವರು ದೆಹಲಿಯ ಪಂಜಾಬಿ ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ಅವರು ಹೇಳಿದರು. ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ಮಾತನಾಡಿ, , ಆಪ್‌ ಆಡಳಿತವು ತನ್ನ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ. ಅವರ ನೇತೃತ್ವದಿಂದ ನಿರಾಶೆಗೊಂಡವರು ಆ ಪಕ್ಷ ತೊರೆಯುತ್ತಿದ್ದಾರೆ ಎಂದು ಹೇಳಿದರು.

70 ಸದಸ್ಯರನ್ನು ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಫೆಬ್ರವರಿಯಲ್ಲಿ ನಡೆಯಲಿದೆ. ಹೀಗಾಗಿ ಇಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ.

Tags:    

Similar News