Deepavali Crackers: ಫರಿದಾಬಾದ್‌ನಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ

ಸುಭಾಷ್ ಕಾಲೊನಿಯಲ್ಲಿರುವ ತಮ್ಮ ಮನೆಯ ಬಾಗಿಲು ಮುರಿದು ಲೈಂಗಿಕ ಕಿರುಕುಳವನ್ನೂ ನೀಡಿದ್ದಾರೆ ಎಂದು ಹಿಂದೂ ಕುಟುಂಬವೊಂದು ಆರೋಪಿಸಿದೆ.;

Update: 2024-11-02 06:03 GMT
Deepavali Crackers

ಫರಿದಾಬಾದ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಕುಟುಂಬವೊಂದರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲ್ಲಭಗಢ ಪಟ್ಟಣದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಸ್ಲಿಂ ಕುಟುಂಬವೊಂದು ಈ ಕೃತ್ಯ ಎಸಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಭಾಷ್ ಕಾಲೊನಿಯಲ್ಲಿರುವ ತಮ್ಮ ಮನೆಯ ಬಾಗಿಲು ಮುರಿದು ಲೈಂಗಿಕ ಕಿರುಕುಳವನ್ನೂ ನೀಡಿದ್ದಾರೆ ಎಂದು ಹಿಂದೂ ಕುಟುಂಬವೊಂದು ಆರೋಪಿಸಿದೆ.

ಪೊಲೀಸರ ಪ್ರಕಾರ ಈ ಪ್ರದೇಶದಲ್ಲಿ ಕೆಲವು ಮಕ್ಕಳು ದೀಪಾವಳಿ ಹಬ್ಬದ ಪ್ರಯಕ್ತ ಪಟಾಕಿಗಳನ್ನು ಸಿಡಿಸುತ್ತಿದ್ದರು. ಇದಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವರು ವಿರೋಧಿಸಿದ್ದರು. ತಮ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸಲೇಬಾರದು ಎಂದು ಆಕ್ಷೇಪ ಎತ್ತಿದ್ದರು.

ಇದರಿಂದ ಕೆರಳಿದ ಹಿಂದೂ ಕುಟುಂಬದ ಕೆಲವು ಮಹಿಳೆಯರು ಆರೋಪಿಯ ಮನೆಗೆ ಹೋಗಿದ್ದರು. ಈ ವೇಳೆ ಅಲ್ಲಿನವರು ಮಹಿಳೆಯರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಅವರ ಮೇಲೆ ಎಸೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆದರಿದ ಅವರು ವಾಪಸಾಗಿದ್ದು ಈ ವೇಳೆ ಆರೋಪಿಗಳು ದೂರುದಾರರ ಮನೆಯ ಮುಖ್ಯ ಬಾಗಿಲು ಮುರಿದು ಅಲ್ಲಿದ್ದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ.

Tags:    

Similar News