Arvind Kejriwal ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿಗಳ ನಾಶ : ಕೇಜ್ರಿವಾಲ್
Arvind Kejriwal : ಕೇಜ್ರಿವಾಲ್ ಅವರೊಂದಿಗೆ ಪಕ್ಷದ ಹಿರಿಯ ಎಎಪಿ ನಾಯಕ ಹಾಗೂ ಶಕುರ್ ಬಸ್ತಿ ಕ್ಷೇತ್ರದ ಅಭ್ಯರ್ಥಿ ಸತ್ಯೇಂದ್ರ ಜೈನ್ ಜತೆಗಿದ್ದರು. 2013, 2015 ಮತ್ತು 2020 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿರುವ ಜೈನ್ 4ನೇ ಬಾರಿಗೆ ಸ್ಪರ್ಧಿಸಿದ್ದಾರೆ.;
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಎಲ್ಲಾ ಕೊಳೆಗೇರಿಗಳನ್ನು ನೆಲಸಮ ಮಾಡಲಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಭಾನುವಾರ ಆರೋಪಿಸಿದ್ದಾರೆ.
ಇಲ್ಲಿನ ಶಕುರ್ ಬಸ್ತಿ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅವರ ಶ್ರೀಮಂತರ ಪಕ್ಷ. ಸ್ಲಂ ನಿವಾಸಿಗಳ ಕಲ್ಯಾಣಕ್ಕಿಂತ ಭೂಸ್ವಾಧೀನಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
'ಬಿಜೆಪಿಗೆ ನಿಮ್ಮ ಮತಗಳು ಗೆಲ್ಲಲು ಅಗತ್ಯವಾಗಿರುತ್ತದೆ. ಬಳಿಕ ನಿಮ್ಮ ಕೊಳೆಗೇರಿ ಪ್ರದೇಶಗಳನ್ನು ನೆಲಸಮ ಮಾಡಲು ಆರಂಭಿಸುತ್ತಾರೆ. ಕಳೆದ ಐದು ವರ್ಷಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ 4,700 ಮನೆಗಳನ್ನು ಮಾತ್ರ ಕೇಂದ್ರ ಸರ್ಕಾರ ನಿರ್ಮಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
'ಕೊಳೆಗೇರಿಯಲ್ಲಿ ವಾಸಿಸುವ ಜನರ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿ ಇಲ್ಲ. ಕೇವಲ ಚುನಾವಣೆಯನ್ನು ಗೆದ್ದು ಅಧಿಕಾರ ಹಿಡಿಯಲು ಭರವಸೆಗಳನ್ನು ನೀಡುತ್ತಾರೆ. ಬಳಿಕ ನಿಮ್ಮ ಮನೆಯ ಪ್ರದೇಶಗಳನ್ನು ನೆಲಸಮ ಮಾಡುತ್ತಾರೆ' ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರೊಂದಿಗೆ ಪಕ್ಷದ ಹಿರಿಯ ಎಎಪಿ ನಾಯಕ ಹಾಗೂ ಶಕುರ್ ಬಸ್ತಿ ಕ್ಷೇತ್ರದ ಅಭ್ಯರ್ಥಿ ಸತ್ಯೇಂದ್ರ ಜೈನ್ ಜತೆಗಿದ್ದರು. 2013, 2015 ಮತ್ತು 2020 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿರುವ ಜೈನ್ 4ನೇ ಬಾರಿಗೆ ಸ್ಪರ್ಧಿಸಿದ್ದಾರೆ.
70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.