ಲೋಕಸಭೆ: ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಅಡಗಿದ ಪ್ರಧಾನಿ ಧ್ವನಿ!

ಮೊದಲ ಸಂಸತ್ ಅಧಿವೇಶನದಲ್ಲಿನ ಬೆಳವಣಿಗೆಗಳ ಸಂಕೇತ ಗಮನಿಸಿದರೆ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದ ಸದಸ್ಯರ ನಡುವೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿದೆ.

By :  Gyan Verma
Update: 2024-07-03 07:14 GMT
ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಏಕೆಂದರೆ, ಇಬ್ಬರೂ ಹಿಂದೆ ಸರಿಯಲು ಸಿದ್ಧರಿಲ್ಲ. 

2024 ರ ಲೋಕಸಭೆ ಚುನಾವಣೆ ನಂತರದ ಮೊದಲ ಸಂಸತ್ ಅಧಿವೇಶನದಲ್ಲಿನ ಬೆಳವಣಿಗೆಗಳನ್ನು ನೋಡಿದರೆ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದ ಸದಸ್ಯರ ನಡುವೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ ಎಂದು ತೋರುತ್ತದೆ. ಎರಡೂ ಪಕ್ಷಗಳ ನಡುವಿನ ಅಂತರ ಒಂದುಗೂಡಿಸಲಾಗದಷ್ಟು ಹೆಚ್ಚಿದೆ ಮತ್ತು ಅರ್ಥ ಮಾಡಿಕೊಳ್ಳಲು ಬಹಳ ಕಡಿಮೆ ಅವಕಾಶವಿದೆ. 

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 135 ನಿಮಿಷಗಳ ಸುದೀರ್ಘ ಭಾಷಣದ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂ ಟದ ಸದಸ್ಯರು ಅವರನ್ನು ನಿರಂತರವಾಗಿ ಅಡ್ಡಿಪಡಿಸಿದ್ದು, ಆಡಳಿತಾರೂಢ ಬಿಜೆಪಿ ಬಲ ಕುಸಿದಿರುವುದು ಗೋಚರವಾಯಿತು. ಇದೇ ಮೊದ ಲ ಬಾರಿಗೆ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದವರ ಮುನಿಸಿಗೆ ಗುರಿಯಾಗಿದ್ದಾರೆ. 

ಕಹಿ ಜಗಳ: ಲೋಕಸಭೆ ಚುನಾವಣೆ ವೇಳೆ ಗೋಚರವಾಗಿದ್ದ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಹಣಾಹಣಿಯು ಮಂಗಳವಾರ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಮುನ್ನೆಲೆಗೆ ಬಂದಿದೆ. 

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಸಂಖ್ಯಾಬಲ ಹೆಚ್ಚಳಗೊಂಡಿದ್ದು, ಪ್ರಧಾನಿ ಮೊದಲ ಬಾರಿಗೆ ಪ್ರತಿಪಕ್ಷಗಳ ಕೋಪವನ್ನು ಎದುರಿಸಿದರು. ಗದ್ದಲ ನಿರಂತರವಾಗಿ ಮುಂದುವರಿದಿದ್ದರಿಂದ, ವಿರೋಧ ಪಕ್ಷದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರಧಾನಿ ಮೋದಿ ಸೂಚಿಸಿದರು. 

ʻಬಿಜೆಪಿಯ ಸಮಸ್ಯೆ ಏನೆಂದರೆ ಅದು ಪ್ರತಿಪಕ್ಷಗಳ ಕಾರ್ಯನೀತಿಯನ್ನು ಮತ್ತು ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸಂಸದರ ಹೆಚ್ಚಳವನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ಯಾವುದೇ ಕಾರ್ಯನೀತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಇಂಡಿಯ ಒಕ್ಕೂಟದ ಸದಸ್ಯರು ಪ್ರಧಾನಿಯನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಿದ್ದರು. ಪ್ರತಿಪಕ್ಷಗಳ ಸಂಖ್ಯಾಬಲಕ್ಕೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬುದು ಸ್ಪಷ್ಟವಾಗಿದೆ,ʼ ಎಂದು ಲೇಖಕ ಮತ್ತು ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ (ಸಿಎಸ್‌ಡಿಎಸ್‌ ) ಪ್ರಾಧ್ಯಾಪಕ ಅಭಯ್ ದುಬೆ ದ ಫೆಡರಲ್‌ಗೆ ತಿಳಿಸಿದರು. 

ಚೆಂಡು ಸರ್ಕಾರದ ಅಂಗಳದಲ್ಲಿ: ಓಂ ಬಿರ್ಲಾ ಅವರು ಎರಡನೇ ಅವಧಿಗೆ ಲೋಕಸಭೆ ಸ್ಪೀಕರ್ ಆಗಿದ್ದರೂ, ಅವರಿಗೆ ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಪ್ರತಿಪಕ್ಷಗಳ ಪ್ರತಿರೋಧದ ಎದುರು ಅಸಹಾಯಕರಾಗಿದ್ದರು. 

ಬಿಜೆಪಿ ಅಧಿಕಾರದಲ್ಲಿರುವುದರಿಂದ, ಸದನವನ್ನು ನಡೆಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ‘ಪ್ರಧಾನಿಯ ಕೆಣಕಲು’ ತಮ್ಮ ಬಳಿ ಸಂಖ್ಯಾಬಲವಿದೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಿದ್ದು, ಮುಂದಿನ ಐದು ವರ್ಷಗಳ ಕಾಲ ಲೋಕಸಭೆಯಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಚೆಂಡು ಬಿಜೆಪಿ ಅಂಗಳದಲ್ಲಿದೆ.

ʻಬಿಜೆಪಿಯು ಪರಿಸ್ಥಿತಿಯನ್ನು ಮರುಪರಿಶೀಲಿಸಬೇಕಿದೆ. ಏಕೆಂದರೆ, ಸದನವನ್ನು ನಡೆಸುವ ಜವಾಬ್ದಾರಿ ಪ್ರಧಾನಿ ಅವರ ಮೇಲಿದೆ. ಪ್ರತಿಪಕ್ಷ ಗಳು ಸರ್ಕಾರಕ್ಕೆ ಸಹಾಯ ಮಾಡಬಹುದು; ಆದರೆ, ಮಾಡಲೇಬೇಕೆಂದು ಒತ್ತಡ ಹೇರುವಂತಿಲ್ಲ. ಸರ್ಕಾರ ಈ ಪ್ರಯತ್ನ ಮಾಡಬೇಕಿದೆ ಮತ್ತು ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ ಎಂದು ವಿರೋಧ ಪಕ್ಷಗಳು ಸ್ಪಷ್ಟ ಸೂಚನೆ ನೀಡಿವೆ,ʼ ಎಂದು ಹೇಳಿದರು.

ತಪ್ಪಿದ ಅವಕಾಶ: ಪ್ರಧಾನಿಯವರ ಎರಡು ಗಂಟೆಗಳ ಸುದೀರ್ಘ ಭಾಷಣವು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರೀಕೃತವಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಏನು ಮಾಡಲಿದ್ದೇವೆ ಎಂಬ ಸ್ಪಷ್ಟ ಆರ್ಥಿಕ ಮಾರ್ಗಸೂಚಿಯನ್ನು ನೀಡಲು ಈ ಅವಕಾಶವನ್ನು ಬಳಸಬಹುದಿತ್ತು. 

ನೀಟ್ ಪರೀಕ್ಷೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಗ್ನಿವೀರ್ ಯೋಜನೆಯಂತಹ ನಿರ್ಣಾಯಕ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಿದ್ದರೂ, ಈ ವಿಷಯಗಳ ಬಗ್ಗೆ ನಿರ್ದಿಷ್ಟ ಕಾರ್ಯಯೋಜನೆಯನ್ನು ರೂಪಿಸಿದ್ದರೆ, ಬಿಜೆಪಿ ಮತದಾರರ ನೆಲೆಯನ್ನುವಿಸ್ತರಿಸಲು ನೆರವಾಗಬಹುದಿತ್ತು.

Tags:    

Similar News