ಕೃತಕ ಬುದ್ಧಿಮತ್ತೆ(ಎಐ) ಜೀವನವನ್ನು ಸುಧಾರಿಸಬಹುದು‌

ರಾಜಕೀಯ ಶಿಕ್ಷಣವನ್ನು ಎಐ ವ್ಯವಸ್ಥೆಯೊಂದಿಗೆ ಸಂಯೋಜಿಸಿದರೆ, ಅದು ಹೆಚ್ಚು ಜನರು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

Update: 2024-02-05 06:30 GMT

ಒಪಿನಿಯನ್‌

ಕೃತಕ ಬುದ್ಧಿಮತ್ತೆ(ಎಐ) ಜೀವನವನ್ನು ಸುಧಾರಿಸಬಹುದು‌

-ದ ಕಾನ್ವರ್ಸೇಷನ್ಸ್‌ 

.................................

ರಾಜಕೀಯ ಶಿಕ್ಷಣವನ್ನು ಎಐ ವ್ಯವಸ್ಥೆಯೊಂದಿಗೆ ಸಂಯೋಜಿಸಿದರೆ, ಅದು ಹೆಚ್ಚು ಜನರು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

ಕೃತಕ ಬುದ್ಧಿಮತ್ತೆಯು ಮನುಷ್ಯರು ಅನೇಕ ವ್ಯವಸ್ಥೆಗಳಲ್ಲಿ ಹೊಂದಿರುವ ಮಿತಿಗಳನ್ನು ತೆಗೆದುಹಾಕುತ್ತದೆ. ನಿರ‍್ಧಾರ ತೆಗೆದುಕೊಳ್ಳುವಲ್ಲಿ ಮಾಹಿತಿಯ ಕೊರತೆ ಇಂಥ ಮಿತಿಗಳಲ್ಲಿ ಒಂದು. ಸಾಂಪ್ರದಾಯಿಕವಾಗಿ, ಜನ ಸಂಕೀರ‍್ಣ ಆಯ್ಕೆಗಳ ಬದಲು ಸರಳ ಆಯ್ಕೆಗಳನ್ನು ಮಾಡುವಂತೆ ಒತ್ತಡ ಇರುತ್ತದೆ. ಕೃತಕ ಬುದ್ಧಿಮತ್ತೆ ಇಂಥ ಮಿತಿಗಳನ್ನು ದಾಟಿಸುವ ಸಾಮರ‍್ಥ್ಯವನ್ನು ಹೊಂದಿದೆ. ಮತ್ತು ಪ್ರಜಾಪ್ರಭುತ್ವ ಹೇಗೆ ಕಾರ‍್ಯ ನಿರ‍್ವಹಿಸುತ್ತದೆ ಎಂಬುದನ್ನು ಪರಿವರ‍್ತಿಸುವ ಸಾಮರ‍್ಥ್ಯ ಕೂಡ ಇದೆ.

ಎಐ ಸಂಶೋಧಕ ಟಾಂಟಮ್‌ ಕಾಲಿನ್ಸ್‌ ಮತ್ತು ನಾನು, ಸಾರ‍್ವಜನಿಕ ಹಿತಾಸಕ್ತಿ ತಂತ್ರಜ್ಞಾನದ ತಜ್ಞ, ಎಐ ಇಂಥ ʻನಷ್ಟ ಉಂಟುಮಾಡುವ ಅಡೆತಡೆʼ(ಲಾಸಿ ಬಾಟಲ್‌ನೆಕ್ಸ್) ಗಳನ್ನು ದಾಟಿಸಬಲ್ಲದು ಎನ್ನುತ್ತೇವೆ. ಮಾಹಿತಿ ಸಿದ್ಧಾಂತದಲ್ಲಿ ʻಲಾಸಿʼ ಎಂಬ ಪದವನ್ನು ಅಪರಿಪೂರ‍್ಣ ಸಂವಹನ ಚಾನೆಲ್‌ ಗಳಿಗೆ ಬಳಸುತ್ತಾರೆ. ಅಂದರೆ, ಮಾಹಿತಿಯನ್ನು ಕಳೆದುಕೊಳ್ಳುವ ಚಾನೆಲ್‌ಗಳು.

ಬಹು ಆಯ್ಕೆಯ ಪ್ರಾಯೋಗಿಕತೆ:

ಮನೆಯಲ್ಲಿ ನಡೆಯಲಿರುವ ಕಾರ‍್ಯಕ್ರಮವೊಂದಕ್ಕೆ ಬಾಣಸಿಗನೊಟ್ಟಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿದೆ ಎಂದುಕೊಳ್ಳಿ. ನಿಮ್ಮ ಆಯ್ಕೆ, ಬಾಣಸಿಗನ ಸಾಮರ‍್ಥ್ಯ ಮತ್ತು ಪದಾರ‍್ಥಗಳ ಲಭ್ಯತೆಗೆ ಅನುಗುಣವಾಗಿ ನಿಮಗೆ ತಿನಿಸುಗಳು ಸಿಗುತ್ತವೆ. ಆದರೆ, ಒಂದು ಸಾಧಾರಣ ರೆಸ್ಟೋರೆಂಟಿನಲ್ಲಿ ನಿಮಗೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಕೆಲವು ತಿನಿಸುಗಳಿರುವ ಮೆನು ಇರುತ್ತದೆ ಮತ್ತು ಅದರಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬಹುದು. ಇದೇ ʻಲಾಸಿ ಬಾಟಲ್‌ನೆಕ್ಸ್‌ʼ. ನಿಮ್ಮ ಬೇಡಿಕೆ ಮತ್ತು ನಿರೀಕ್ಷೆಗಳು ಬಹುಮುಖದವು ಮತ್ತು ಸಮೃದ್ಧವಾಗಿರುತ್ತವೆ. ಅಡುಗೆ ಕೂಡ ಬಹು ಆಯಾಮದ್ದಾಗಿರುತ್ತದೆ. ಆದರೆ, ಇವೆರಡನ್ನು ಸಂಪರ‍್ಕಿಸುವ ಮಾರ‍್ಗ ಇರುವುದಿಲ್ಲ. ಜನರು ಮೆನುವಿನಂಥ ಬಹು ಆಯ್ಕೆಯ ವ್ಯವಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರ‍್ಧಾರ ತೆಗೆದುಕೊಳ್ಳುವಿಕೆಯನ್ನು ಸರಳಗೊಳಿಸಿ ಕೊಳ್ಳುವಂತೆ ಬಲವಂತ ಮಾಡಲಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಮಾಹಿತಿಗಳನ್ನು ಕಳೆದುಕೊಳ್ಳುತ್ತಾರೆ.

ಜನರು ಇಂಥ ಅಡೆತಡೆಗಳಿಗೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ಅದನ್ನು ನಾವು ಗಮನಿಸುವುದೇ ಇಲ್ಲ. ಒಂದು ವೇಳೆ ಗಮನಿಸಿದರೂ, ಗಾತ್ರ ಮತ್ತು ಕ್ಷಮತೆಗೆ ಅನಿವಾರ‍್ಯ ಎಂದು ಊಹಿಸುತ್ತೇವೆ.

ಸಾಧ್ಯತೆಗಳು:

ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಮಾನವನ ಬುದ್ಧಿಯ ಮಿತಿಗಳನ್ನು ಮೀರುವ ಸಾಮರ‍್ಥ್ಯವನ್ನು ಹೊಂದಿವೆ. ಬೇಡಿಕೆ ಬದಿಯಲ್ಲಿ ಜನರ ಸಾಧನೆಗಳು ಮತ್ತು ಅನುಭವಗಳನ್ನು ಸಂಗ್ರಹಿಸುವ ಮೂಲಕ ಹಾಗೂ ಅವರ ಸಾಮರ‍್ಥ್ಯ, ಸಂಪನ್ಮೂಲ ಮತ್ತು ಸೃಜನಶೀಲ ಸಾಧ್ಯತೆಗಳನ್ನು ಪೂರೈಕೆ ಕಡೆ ಇರಿಸಿ, ಎಐ ವ್ಯವಸ್ಥೆಗಳು ನಿಖರವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಗ್ರಾಹಕರ ಸಂಕೀರ‍್ಣ ಆಯ್ಕೆಗಳನ್ನು ಸಬಲಗೊಳಿಸುತ್ತವೆ. ನಿಮ್ಮ ರುಚಿ ಅಥವಾ ಆದ್ಯತೆಗಳು ಅಥವಾ ವೈಯಕ್ತಿಕಗೊಳಿಸಿದ ಆಯ್ಕೆಗಳಿಗೆ ಅನುಗುಣವಾಗಿ ತಿನಿಸುಗಳನ್ನು ಸಿದ್ಧಪಡಿಸಿದ ರೆಸ್ಟೊರೆಂಟ್‌ಗೆ ಹೋಗುವುದನ್ನುಇಲ್ಲವೇ ವೈಯಕ್ತಿಕ ಆಯ್ಕೆಗಳಿರುವ ಪಟ್ಟಿಯನ್ನು ಕೊಡುವುದನ್ನು ಕಲ್ಪಿಸಿಕೊಳ್ಳಿ.

ಇದಕ್ಕಾಗಿ ಕೆಲವು ಆರಂಭಿಕ ಪ್ರಯತ್ನ ಮಾಡಲಾಗಿದೆ. ಆಹಾರದ ನಿರ‍್ಬಂಧಗಳು ಮತ್ತು ಫ್ರಿಜ್‌ನಲ್ಲಿ ಏನಿದೆ ಎಂಬುದನ್ನು ಆಧರಿಸಿ, ಜನರು ತಮ್ಮ ಊಟವನ್ನು ಬದಲಿಸಲು ಚಾಟ್‌ಜಿಪಿಟಿಯನ್ನು ಬಳಸುತ್ತಿದ್ದಾರೆ. ಈ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ, ಅವು ಅಭಿವೃದ್ಧಿಗೊಂಡ ನಂತರ ಅನಂತ ಸಾಧ್ಯತೆಗಳು ತೆರೆದುಕೊಳ್ಳುತ್ತವೆ; ಸವಾಲುಗಳು ಇದ್ದೇ ಇರುತ್ತವೆ.

ಕಾರ‍್ಮಿಕ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಉದ್ಯೋಗದಾತರು ಅರ‍್ಜಿದಾರರ ಅರ‍್ಹತೆ, ಡಿಪ್ಲೊಮಾ ಮತ್ತು ಪ್ರಮಾಣಪತ್ರಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಎಐ ವ್ಯವಸ್ಥೆಯೊಂದು ಕೋರ್ಸ್‌ ವರ್ಕ್‌, ಶಿಕ್ಷಕರ ಪ್ರತಿಕ್ರಿಯೆ ಮತ್ತು ಉದ್ಯೋಗಾವಕಾಶ ಕುರಿತು ಪಾರದರ‍್ಶಕ ಮೌಲ್ಯಮಾಪನ ಮಾಡಬಲ್ಲದು.

ವಸ್ತ್ರೋದ್ಯಮವನ್ನು ಪರಿಗಣಿಸಿ; ಹಣ ಮತ್ತು ಸಮಯ ಇರುವವರು ದರ‍್ಜಿಯಿಂದ ಬಟ್ಟೆ ಸಿದ್ಧಪಡಿಸಿಕೊಳ್ಳಬಹುದು. ಆದರೆ, ಹೆಚ್ಚಿನವರು ಸಾಮೂಹಿಕವಾಗಿ ಉತ್ಪಾದಿತ ವಸ್ತ್ರಗಳನ್ನು ಖರೀದಿಸುತ್ತಾರೆ. ನಿಮ್ಮಇಷ್ಟದ ಶೈಲಿ, ಫೋಟೋ ಆಧಾರದ ಮೇಲೆ ಅಳತೆ ತೆಗೆದುಕೊಳ್ಳುವುದು ಮತ್ತು ಲಭ್ಯವಿರುವ ವಸ್ತ್ರವನ್ನು ಬಳಸಿ ಎಐ ಕಡಿಮೆ ವೆಚ್ಚದಲ್ಲಿ ಉತ್ತಮ ದಿರಿಸುಗಳ ಉತ್ಪಾದನೆಗೆ ನೆರವಾಗುತ್ತದೆ.

ಸಾಫ್ಟ್‌ವೇರ್‌ ನ್ನು ಪರಿಗಣಿಸೋಣ; ಕಂಪ್ಯೂಟರ್ ಪ್ರೋಗ್ರಾಮ್‌ಗಳು ಏಕರೂಪದ ಇಂಟರ್‌ಫೇಸ್‌ಗಳನ್ನು ಬಳಸುತ್ತವೆ; ಇಲ್ಲಿ ವೈಯಕ್ತೀಕರಣಕ್ಕೆ ಸೀಮಿತ ಅವಕಾಶ ಇರುತ್ತದೆ. ಆದರೆ, ಪ್ರತಿಯೊಬ್ಬರೂ ವೈವಿಧ್ಯಮಯ ಅಗತ್ಯ ಮತ್ತು ಕೆಲಸದ ಶೈಲಿ ಹೊಂದಿರುತ್ತಾರೆ. ಆದ್ದರಿಂದ, ಬಳಕೆದಾರ ಮತ್ತು ನಿರ‍್ದಿಷ್ಟ ಸಾಫ್ಟ್‌ವೇರ್ ನಡುವಿನ ಸಂವಹನಗಳನ್ನು ಅರ‍್ಥಮಾಡಿಕೊಳ್ಳುವ ಎಐ ವ್ಯವಸ್ಥೆಗಳು ಪ್ರೋಗ್ರಾಮ್‌ ಗಳನ್ನು ವೈಯಕ್ತೀಕರಿಸಬಹುದು ಇಲ್ಲವೇ ಮರುವಿನ್ಯಾಸಗೊಳಿಸಬಹುದು.

ಪ್ರಜಾಪ್ರಭುತ್ವದ ಅಡಚಣೆ:

ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆ ರಾಜಕೀಯದಲ್ಲಿದೆ. ಜ್ಞಾನ ಮತ್ತು ಸಮಯ ಇರುವವರು ಪ್ರಶ್ನಿಸುವ ಮೂಲಕ ಉತ್ತಮ ಕಾನೂನುಗಳನ್ನು ರಚಿಸಲು ಸಹಾಯ ಮಾಡಬಹುದು. ಆದರೆ, ಕೋಟ್ಯಂತರ ಮಂದಿ ಇರುವ ಸಮಾಜದಲ್ಲಿ ನೈತಿಕ ಚರ‍್ಚೆ ಸಾಧ್ಯವಿಲ್ಲ. ಆದ್ದರಿಂದ, ಎರಡು ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಈ ಸಮಸ್ಯೆಯನ್ನು ಎಐ ಮೂಲಕ ನಿವಾರಿಸಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಲಭ್ಯ ಆಯ್ಕೆಗಳನ್ನು ಪ್ರಯತ್ನಿಸುವ ಬದಲು, ನಿಮ್ಮ ಆದ್ಯತೆಗಳನ್ನು ಎಐ ವ್ಯವಸ್ಥೆಗೆ ಊಡಿಸಿದಲ್ಲಿ, ಅದು ನಿಮ್ಮ ಪರವಾಗಿ ನಿರ‍್ದಿಷ್ಟ ಕಾರ‍್ಯನೀತಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇದು ಪ್ರಜಾಪ್ರಭುತ್ವದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ದಾರಿ ಮಾಡಿಕೊಡಬಹುದು.

ಮತದಾರರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಇದನ್ನು ಸಾಧಿಸಲು ಒಂದು ಮಾರ‍್ಗ. ಸಾಂಪ್ರದಾಯಿಕ ಮತದಾನ ವ್ಯವಸ್ಥೆ ಪ್ರತಿಯೊಬ್ಬ ವ್ಯಕ್ತಿಯ ರಾಜಕೀಯ ಆದ್ಯತೆಯಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಗಣಿಸುವುದಿಲ್ಲ. ಉದಾಹರಣೆಗೆ, ನಿಮ್ಮ ಜೇಬಿನಲ್ಲಿರುವ ಎಐ ತಂತ್ರಜ್ಞಾನ , ಉದಾಹರಣೆಗೆ ನಿಮ್ಮ ಫೋನ್, ನಿಮ್ಮ ಆದ್ಯತೆಗಳು ಮತ್ತು ಆಶಯಗಳನ್ನು ತಿಳಿದುಕೊಂಡಿದ್ದು, ನಿಮ್ಮ ಪರವಾಗಿ ಮತ ಚಲಾಯಿಸುತ್ತದೆ.

ಎಐ ವ್ಯವಸ್ಥೆಗಳು ರಾಜಕೀಯ ಶಿಕ್ಷಣ ನೀಡಲು ಸಾಧ್ಯವಾದರೆ, ಹೆಚ್ಚು ಜನರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತ್ತು ರಾಜಕೀಯ ಜಾಗೃತಿ ಹೆಚ್ಚಿಸಲು ಪ್ರೋತ್ಸಾಹಿಸಬಹುದು. ಇದು ಜನಪ್ರತಿನಿಧಿಗಳಿಂದಾದ ಸಮಸ್ಯೆಗಳನ್ನು ಪರಿಹರಿಸಬಹುದು. ಏಕೆಂದರೆ, ಹೆಚ್ಚಿನವರು ತಮ್ಮನ್ನು ಆಯ್ಕೆ ಮಾಡಿದವರ ಅಭಿಪ್ರಾಯಗಳನ್ನು ಮಾತ್ರ ಪ್ರತಿಬಿಂಬಿಸುತ್ತಾರೆ.

ಮತ್ತೊಂದೆಡೆ, ವೈಯಕ್ತಿಕ ದತ್ತಾಂಶಕ್ಕೆ ಎಐಗೆ ಪ್ರವೇಶ ನೀಡಿದಲ್ಲಿ ಗೋಪ್ಯತೆ ಭಂಗದ ಅಪಾಯಗಳಿರುತ್ತವೆ. ಯಾವ ಕ್ರಮ ತೆಗೆದುಕೊಳ್ಳಬೇಕೆಂಬ ನಿರ‍್ಧಾರವನ್ನು ಎಐಗೆ ಬಿಡುವುದು ಸೂಕ್ತವಲ್ಲ. ಇದರೊಟ್ಟಿಗೆ, ಸುಧಾರಿತ ಎಐ ವ್ಯವಸ್ಥೆಗಳು ಇನ್ನೂ ವೈಜ್ಞಾನಿಕ ಕಲ್ಪನೆಗಳಾಗಿವೆ.

ಮೊದಲ ಹೆಜ್ಜೆಗಳು:

ಈ ತಂತ್ರಜ್ಞಾನವನ್ನು ಮೊದಲಿಗೆ ರಾಜಕೀಯೇತರ ಕ್ಷೇತ್ರಗಳಲ್ಲಿ ಬಳಸಬಹುದು. ಡಿಜಿಟಲ್ ಮಾಧ್ಯಮ ವೇದಿಕೆಗಳು ಸಾಂಪ್ರದಾಯಿಕ ಮಾಧ್ಯಮಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ. ರೇಡಿಯೋ ಕೇಂದ್ರಗಳು ಮೆನುವನ್ನು ಹೋಲುತ್ತವೆ: ನಿಮ್ಮ ಅಭಿರುಚಿ ಎಷ್ಟೇ ನಿರ‍್ದಿಷ್ಟವಾಗಿದ್ದರೂ, ನೀವು ಕೆಲವೇ ಆಯ್ಕೆಗಳಿಂದ ಆರಿಸಬೇಕಾಗುತ್ತದೆ. ಆರಂಭಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳು ಸ್ವಲ್ಪಮಟ್ಟಿಗೆ ಉತ್ತಮವಾಗಿದ್ದವು. ಅವು, ʼಈ ವ್ಯಕ್ತಿಯು ಜಾಝ್ ಸಂಗೀತ ಇಷ್ಟಪಡುತ್ತಾನೆ, ಆದ್ದರಿಂದ ನಾವು ಅವರಿಗೆ ಜಾಝ್‌ ಅನ್ನೇ ಸೂಚಿಸುತ್ತೇವೆ.ʼ

ಸ್ಟ್ರೀಮಿಂಗ್ ಪ್ಲಾಟ್‌ಫಾ‌ರ್ಮ್‌ಗಳು ಬಳಕೆದಾರರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತವೆ. ಪ್ರತಿ ಟ್ರ‍್ಯಾಕ್ ಅನ್ನು ವಿವರಿಸಲು ವ್ಯಾಪಕ ಕ್ರಮಗಳನ್ನು ಬಳಸುತ್ತವೆ. ಜನಪ್ರಿಯತೆಯ ಬದಲು ವಿವರವಾದ ವಿಶ್ಲೇಷಣೆ ಆಧಾರದ ಮೇಲೆ ಲೇಖನಗಳನ್ನುಆಯ್ಕೆ ಮಾಡಲು ಶೈಕ್ಷಣಿಕ ನಿಯತಕಾಲಿಕಗಳು ಇದೇ ವಿಧಾನ ಅನುಸರಿಸುತ್ತವೆ.

ಮೈಕ್ರೋಸಾಫ್ಟ್ ಸಮೀಕ್ಷೆ ಪ್ರಕಾರ, ಶೇ.೪೯ ರಷ್ಟು ಜನರು ಎಐ ತಮ್ಮ ಉದ್ಯೋಗವನ್ನು ಕಸಿದುಕೊಳ್ಳುತ್ತದೆ ಎಂದು ಚಿಂತಿತರಾಗಿದ್ದರು; ಆದರೆ, ಶೇ.೭೦ ಮಂದಿ ಎಐ ಕೆಲಸದ ಹೊರೆ ಕಡಿಮೆ ಮಾಡಲಿದೆ ಎಂದು ಉತ್ಸುಕರಾಗಿದ್ದರು. ಕೃತಕ ಅಡೆತಡೆರಹಿತ ಜಗತ್ತು ತನ್ನದೇ ಆದ ಅಪಾಯಗಳೊಟ್ಟಿಗೆ ಬರುತ್ತದೆ. ಎಐ ಯಿಂದ ಉದ್ಯೋಗ ನಷ್ಟ ಆಗಲಿದೆ. ಆದರೆ, ಈ ತಂತ್ರಜ್ಞಾನ ಜನರನ್ನು ಮುಕ್ತಗೊಳಿಸುವ ಸಾಮರ‍್ಥ್ಯ ಹೊಂದಿದೆ. ರಾಜಕೀಯ ಮತ್ತು ನೇಮಕದಲ್ಲಿ ಗಾಢ ಪರಿಣಾಮ ಬೀರಲಿದೆ.

……



Similar News