Pakistan Hijack: ಪಾಕಿಸ್ತಾನ ರೈಲಿನ ಮೇಲೆ ಉಗ್ರರ ದಾಳಿ; 150 ಜನರ ರಕ್ಷಣೆ, 27 ಉಗ್ರರ ಹತ್ಯೆ

ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್ಎ) ಉಗ್ರರು ಮಂಗಳವಾರ ದಾಳಿ ನಡೆಸಿ ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದರು.;

Update: 2025-03-12 05:33 GMT

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಯಾಣಿಕ ರೈಲೊಂದನ್ನು ಹೈಜಾಕ್ ಮಾಡಿದ್ದ ಉಗ್ರರು ನೆರವಿಗೆ ಬಂದ 16 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ರೈಲಿನಲ್ಲಿರುವ ಸುಮಾರು 400 ಪ್ರಯಾಣಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಸೇನೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ 150 ಪ್ರಯಾಣಿಕರನ್ನು ರಕ್ಷಿಸಿ 27 ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್​ಪ್ರೆಸ್​ ಪ್ರೆಸ್ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್ಎ) ಉಗ್ರರು ಮಂಗಳವಾರ ದಾಳಿ ನಡೆಸಿ ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದರು. ಗಡಾಲರ್ ಹಾಗೂ ಪೆಹೊ ಕುನ್ರಿ ಕಣಿವೆ ಪ್ರದೇಶದ ಸುರಂಗದಲ್ಲಿ ಬಂದೂಕುಧಾರಿ ಉಗ್ರರು ದಾಳಿ ನಡೆಸಿ, ರೈಲಿನಲ್ಲಿದ್ದ ಸೈನಿಕರನ್ನು ಹತ್ಯೆಗೈದಿದ್ದರು. ಅಲ್ಲದೆ, ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.

ಉಗ್ರರ ಗುಂಡಿನ ದಾಳಿಯ ಮಧ್ಯೆಯೇ ಪಾಕಿಸ್ತಾನದ ಸೈನಿಕರು ಇಡೀ ಸುರಂಗವನ್ನು ಸುತ್ತುವರಿದಿದ್ದಾರೆ. ಹೆಣ್ಣುಮಕ್ಕಳು, ಮಕ್ಕಳನ್ನು ಆದ್ಯತೆಯ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೆ ಸುಮಾರು 27 ಉಗ್ರರನ್ನೂ ಸೈನಿಕರು ಹತ್ಯೆ ಮಾಡಿದ್ದಾರೆ. ಇನ್ನೂ 250 ಪ್ರಯಾಣಿಕರನ್ನು ರಕ್ಷಣೆ ಮಾಡಬೇಕಿದ್ದು, ಕಾರ್ಯಾಚರಣೆ ಮುಂದುವರಿದಿದೆ.


ಏನಿದು ಘಟನೆ?

ಸುಮಾರು 500ರಷ್ಟು ಪ್ರಯಾಣಿಕರನ್ನು ಹೊತ್ತು ಕ್ವೆಟ್ಟಾದಿಂದ 1600 ಕಿ.ಮೀ. ದೂರದ ಪೇಶಾವರ್‌ಗೆ ಜಾಫರ್ ಎಕ್ಸ್​ಪ್ರೆಸ್​ ರೈಲು ರೈಲು ಹೊರಟಿತ್ತು. ಈ ವೇಳೆ ಬಂಡುಕೋರರು ಮೊದಲಿಗೆ ರೈಲು ಹಳಿಯನ್ನು ಸ್ಫೋಟಿಸಿದ್ದಾರೆ. ಹಳಿ ಸ್ಫೋಟಗೊಂಡ ಕಾರಣ ರೈಲು ನಿಂತಿದೆ. ಕೂಡಲೇ ಉಗ್ರರು, ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದು,ಲೋಕೊಪೈಲೆಟ್​ ಗಾಯಗೊಂಡಿದ್ದಾಾನೆ.

ತಕ್ಷಣವೇ ಪಾಕಿಸ್ತಾನ ಸೇನೆ ರಕ್ಷಣಾ ಕಾರ್ಯಾಾಚರಣೆ ಕೈಗೊಂಡಿದ್ದು, ಮಿಲಿಟರಿ ವಿಮಾನಗಳನ್ನು ಬಳಸಿ ಉಗ್ರರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಲೂಚಿಸ್ತಾಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಸೇನೆ ದಾಳಿ ನಿಲ್ಲಿಸದಿದ್ದರೆ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿತು.

2024ರ ನವೆಂಬರ್ ನಲ್ಲೂ ಕ್ವೆಟ್ಟಾದ ರೈಲು ನಿಲ್ದಾಣದಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಜನ ಮೃತಪಟ್ಟು, 62 ಮಂದಿ ಗಾಯಗೊಂಡಿದ್ದರು. ಕೆಲ ದಿನಗಳ ಹಿಂದೆಯೂ ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ದಾಳಿ ನಡೆಸಲಾಗಿತ್ತು.

ಏನಿದು ಬಲೂಚಿಸ್ತಾನ ವಿವಾದ?

ಬಲೂಚಿಸ್ತಾನ ಪ್ರಾಂತ್ಯ ಪಾಕಿಸ್ತಾಾನದ ಅತ್ಯಂತ ವಿಸ್ತಾರವಾದ ಪ್ರದೇಶ. ಇದು ಆ ದೇಶದ ಪೂರ್ವ ಭಾಗದಲ್ಲಿದೆ. ಇಲ್ಲಿನ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ಸ್ವಾಾತಂತ್ರ್ಯಗೊಂಡ ನಂತರದಿಂದಲೂ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುತ್ತಲೇ ಇದ್ದಾರೆ. ಸೇನೆಯಲ್ಲಿ ಬಳಸಿ ಪಾಕಿಸ್ತಾನ ಹಲವು ಬಾರಿ ಇವರನ್ನು ಹತ್ತಿಕ್ಕಿದ್ದರೂ ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗಿಲ್ಲ.

2024ರ ನವೆಂಬರ್ ನಲ್ಲೂ ಕ್ವೆಟ್ಟಾದ ರೈಲು ನಿಲ್ದಾಣದಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಜನ ಮೃತಪಟ್ಟಿದ್ದರೆ, 62 ಮಂದಿ ಗಾಯಗೊಂಡಿದ್ದರು. ಕೆಲ ದಿನಗಳ ಹಿಂದೆಯೂ ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ದಾಳಿ ನಡೆಸಲಾಗಿತ್ತು. 

Tags:    

Similar News