ಚುನಾವಣಾ ಆಯೋಗಕ್ಕೆ ದೂರು ನೀಡದ ರಾಹುಲ್ ಗಾಂಧಿ
ಮತ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ರಾಹುಲ್ ಗಾಂಧಿ ಅವರು ಕೊನೆ ಕ್ಷಣದಲ್ಲಿ ಚುನಾವಣಾ ಆಯೋಗಕ್ಕೆ ಭೇಟಿ ನೀಡದೇ ವಾಪಸ್ ತೆರಳಿದರು. ಮಹದೇವಪುರ ಚುನಾವಣಾ ಅಕ್ರಮದ ಕುರಿತು ಸಹಿ ಮಾಡಿದ ಅಫಿಡೆವಿಟ್ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯುಕ್ತರು ಪತ್ರ ಬರೆದಿದ್ದರು.
ನಿಗದಿಯಂತೆ ಪ್ರತಿಭಟನಾ ಸಮಾವೇಶ ಮುಗಿಸಿ ಚುನಾವಣಾ ಆಯೋಗಕ್ಕೆ ತೆರಳಿ ಪ್ರಮಾಣ ಪತ್ರದ ಜತೆಗೆ ದೂರು ಸಲ್ಲಿಸಬೇಕಾಗಿತ್ತು. ಆದರೆ, ಸಮಾವೇಶದಲ್ಲೇ ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆಗಳನ್ನು ಕೇಳಿ ರಾಹುಲ್ ಹಿಂತಿರುಗಿದರು.
Update: 2025-08-08 08:57 GMT