ಸಿಗಾಚಿ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಸ್ಫೋಟ – ಕಂಪೆನಿ ಆಡಳಿತ ಮಂಡಳಿಗೆ ಛೀಮಾರಿ ಹಾಕಿದ ಸರ್ಕಾರ

ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿ ವಿರುದ್ಧ ತೆಲಂಗಾಣ ಸರ್ಕಾರ ಮಂಗಳವಾರ ಛೀಮಾರಿ ಹಾಕಿದೆ. ತೆಲಂಗಾಣದ ಸಿಗಾಚಿ ಫಾರ್ಮಾ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಹಲವರು ಮೃತಪಟ್ಟಿದ್ದರೂ,  ಈ ಘಟನೆ ಬಳಿಕ ಅಧಿಕಾರಿಗಳು  ಸ್ಥಳದಲ್ಲಿಲ್ಲದಿರುವುದು ಸರ್ಕಾರವನ್ನು ಕೋಪಕ್ಕೆ ಕಾರಣವಾಗಿದೆ. 

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಚಿವರಾದ ಶ್ರೀಧರ್ ಬಾಬು, ದಾಮೋದರ ರಾಜ ನರಸಿಂಹ, ಜಿ. ವಿವೇಕ್ ಮತ್ತು ಪಿ. ಋಷಿನಿವಾಸ ರೆಡ್ಡಿ ಅವರೊಂದಿಗೆ ಕಾರ್ಖಾನೆ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಹಿಂದಿನ ಇದೇ ರೀತಿಯ ಘಟನೆಗಳು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳು ಸೇರಿದಂತೆ ಘಟನೆಯ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿ ಕೇಳಿದರು. 

ಸಿಗಾಚಿಗೆ ಸೇರಿದ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ  ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ಸುಮಾರು 35ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಧಿಕ ಮಂದಿ ಗಾಯಗೊಂಡಿದ್ದಾರೆ.  

ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಕಂಪನಿಯ ಅಧಿಕಾರಿಯೊಬ್ಬರು, ಸಿಗಾಚಿಯ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು ಸೋಮವಾರ ಇಲ್ಲಿದ್ದರು ಎಂದು ತಿಳಿಸಿದರು. 

"ದೊಡ್ಡ ಅಪಘಾತ ಸಂಭವಿಸಿದೆ. ಅವರು (ಹಿರಿಯ ಆಡಳಿತ ಮಂಡಳಿ) ಬರಬೇಕು. ಅವರು ಮೃತ ವ್ಯಕ್ತಿಯ ಕುಟುಂಬಗಳನ್ನು ಭೇಟಿ ಮಾಡಬೇಕು. ನೀವು ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಅವರು ಬರಬೇಕು. ಅವರನ್ನು ಬರಲು ಹೇಳಿ," ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

"ನಿಮ್ಮ ಉನ್ನತ ಆಡಳಿತ ಮಂಡಳಿಯು 24 ಗಂಟೆಗಳ ನಂತರವೂ ಇಲ್ಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಅವರು ಅಷ್ಟೊಂದು ಕಾರ್ಯನಿರತರಾಗಿದ್ದರೆ, ಅವರು ಕಾರ್ಖಾನೆಯನ್ನು ಏಕೆ ನಡೆಸಬೇಕು? ಇಂತಹ ದೊಡ್ಡ ಘಟನೆ, ಮಾರಕ ಘಟನೆ ನಡೆದಿದೆ. ಮತ್ತು ನಮ್ಮ ಸರ್ಕಾರ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶ್ರೀಧರ್ ಬಾಬು ಹೇಳಿದರು. ಕಳೆದ 24 ಗಂಟೆಗಳಿಂದ ಸಚಿವರಾದ ರಾಜ ನರಸಿಂಹ ಮತ್ತು ವಿವೇಕ್ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

Update: 2025-07-01 07:57 GMT

Linked news