ಸಿಗಾಚಿ ಕಾರ್ಖಾನೆ ಸ್ಫೋಟ: 90 ಕಾರ್ಮಿಕರು ಪ್ರಮುಖ ಸ್ಫೋಟದ... ... Telangana Sigachi pharma fire LIVE ’ ತೆಲಂಗಾಣ ಫಾರ್ಮಾ ಘಟಕದಲ್ಲಿ ಸ್ಫೋಟ : ಸಾವಿನ ಸಂಖ್ಯೆ 42ಕ್ಕೆ ಏರಿಕೆ, ₹1 ಕೋಟಿ ಪರಿಹಾರ ಘೋಷಣೆ

ಸಿಗಾಚಿ ಕಾರ್ಖಾನೆ ಸ್ಫೋಟ: 90 ಕಾರ್ಮಿಕರು ಪ್ರಮುಖ ಸ್ಫೋಟದ ಕೇಂದ್ರದಲ್ಲಿದ್ದರು, ಡಿಎನ್‌ಎ ಪರೀಕ್ಷೆ ಅಗತ್ಯ

ಸೋಮವಾರ ಬೆಳಿಗ್ಗೆ 9:28 ರಿಂದ 9:35ರ ನಡುವೆ ಸ್ಫೋಟ ಸಂಭವಿಸಿದ್ದು, ಆ ಸಮಯದಲ್ಲಿ ಸುಮಾರು 150 ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಐಜಿಪಿ ವಿ. ಸತ್ಯನಾರಾಯಣ ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯು ಎಷ್ಟು ಭೀಕರವಾಗಿತ್ತೆಂದರೆ, ಸುಮಾರು 90 ಕಾರ್ಮಿಕರು ಸ್ಫೋಟ ಸಂಭವಿಸಿದ ಸ್ಥಳದ ಅತ್ಯಂತ ಸಮೀಪದಲ್ಲೇ ಇದ್ದರು ಎಂದು ಐಜಿಪಿ ಹೇಳಿದ್ದಾರೆ. ಈ ಕಾರಣದಿಂದಲೇ ಸಾವಿನ ಸಂಖ್ಯೆ ಏರಿಕೆ ಕಂಡಿದ್ದು, ಪ್ರಸ್ತುತ 42 ಮಂದಿ ಮೃತಪಟ್ಟಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ದುರದೃಷ್ಟವಶಾತ್, ಮೃತಪಟ್ಟವರಲ್ಲಿ ಕೆಲವರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಹೀಗಾಗಿ, ಮೃತದೇಹಗಳ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಕುಟುಂಬಗಳನ್ನು ಕಳೆದುಕೊಂಡವರಿಗೆ ಇದು ಮತ್ತಷ್ಟು ನೋವು ತಂದಿದೆ. 

Update: 2025-07-01 04:54 GMT

Linked news