ಶುಭಾಂಶ್‌ ಶುಕ್ಲಾಗೆ ಮೈಸೂರು ಹಲ್ವಾ

ಶುಭಾಂಶು ಶುಕ್ಲಾ ಒಳಗೊಂಡಂತೆ ನಾಲ್ವರು ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ಯಾನದಲ್ಲಿ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್) ತಯಾರಿಸಿರುವ ವಿವಿಧ ಭಾರತೀಯ ಭಕ್ಷ್ಯಗಳನ್ನು ಸವಿಯಲಿದ್ದಾರೆ.

ಮಾವಿನ ರಸ, ಹೆಸರು ಬೇಳೆ ಹಲ್ವಾ, ಕ್ಯಾರೆಟ್‌ ಹಲ್ವಾ ಹಾಗೂ ಕೆಲವು ವಿಧದ ಅನ್ನವೂ ಸೇರಿದಂತೆ ಭಾರತೀಯ ಅಡುಗೆಯ ವೈವಿಧ್ಯಮಯ ರುಚಿಗಳು ಬಾಹ್ಯಾಕಾಶದಲ್ಲಿ ಲಭ್ಯವಾಗಲಿವೆ.

ನಾಸಾ ತನ್ನ ಗಗನಯಾನಿಗಳಿಗೆ 'ಸ್ಪೇಸ್‌ ಫುಡ್‌ ಸಿಸ್ಟಮ್ಸ್‌ ಲ್ಯಾಬೋರೇಟರಿ'ಯಿಂದ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ. ಡಿಎಫ್‌ಆರ್‌ಎಲ್‌ನ ಈ ಕೊಡುಗೆ ಭಾರತದ ಸ್ವಾವಲಂಬನೆ ಮತ್ತು ವೈಜ್ಞಾನಿಕ ಸಾಮರ್ಥ್ಯಕ್ಕೆ ಮತ್ತೊಂದು ನಿದರ್ಶನವಾಗಿದೆ. ಶುಭಾಂಶು ಶುಕ್ಲಾ ಅವರು ಈಗಾಗಲೇ ಡಿಎಫ್‌ಆರ್‌ಎಲ್ (Defense Food Research Laboratory) ತಯಾರಿಸಿದ್ದ 50ಕ್ಕೂ ಹೆಚ್ಚು ಆಹಾರ ಮಾದರಿಗಳನ್ನು ರುಚಿ ನೋಡಿದ್ದು, ಬಾಹ್ಯಾಕಾಶ ಯಾತ್ರೆಯಲ್ಲಿ ಆಹಾರ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವುದು ಈ ಅಧಿವೇಶನದ ಉದ್ದೇಶವಾಗಿತ್ತು.

Update: 2025-06-25 08:11 GMT

Linked news