ಘಟನೆಯ ಭಯಾನಕತೆಯನ್ನು ವಿವರಿಸಿದ ಪ್ರಯಾಣಿಕ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಬಳಿ ಬೆಂಕಿ ಹತ್ತಿಕೊಂಡ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕರು ಆ ಭೀಕರ ಘಟನೆ ಬಗ್ಗೆ ವಿವರಿಸಿದ್ದಾರೆ.  ಅವರು ಕಿಟಕಿಯ ಬಳಿ ಬೆಂಕಿಯನ್ನು ಗಮನಿಸಿ ತಕ್ಷಣ ಚಾಲಕರಿಗೆ ಎಚ್ಚರಿಕೆ ನೀಡಿರಿವುದಾಗಿ ತಿಳಿಸಿದರು. 

"ನಿನ್ನೆ ರಾತ್ರಿ, ನಾವು ಬೆಂಗಳೂರಿಗೆ ಪ್ರಯಾಣಿಸಲು ಕುಕಟ್‌ಪಲ್ಲಿಯಲ್ಲಿ ಬಸ್ ಹತ್ತಿದೆವು. ನಾನು ಚಾಲಕರ ಸೀಟಿನ ಹಿಂದೆ ಕುಳಿತಿದ್ದೆ. ಸುದೀರ್ಘ ಪ್ರಯಾಣದ ನಂತರ, ಸುಮಾರು 2:30 ರಿಂದ 3:30ರ ನಡುವೆ, ನನಗೆ ಕಿಟಕಿಯ ಬದಿಯಲ್ಲಿ ಬೆಂಕಿ ಕಾಣಿಸಿತು ಮತ್ತು ತಕ್ಷಣವೇ ಚಾಲಕರಿಗೆ ಎಚ್ಚರಿಕೆ ನೀಡಿದೆ. ಬಸ್‌ ತಕ್ಷಣ ನಿಲ್ಲಿಸಲಾಯಿತು. ಈ ಮಧ್ಯೆ, ತಪ್ಪಿಸಿಕೊಳ್ಳಲು ನಾವು ಕಿಟಕಿಗಳನ್ನು ಒಡೆಯಲು ಪ್ರಯತ್ನಿಸಿದೆವು. ಸುಮಾರು 20 ಜನರು ಬಸ್ಸಿನಿಂದ ಹೊರಬರಲು ಯಶಸ್ವಿಯಾದರು, ಆದರೆ ಉಳಿದವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು. 

Update: 2025-10-24 05:22 GMT

Linked news