ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನ: ಆ ದೇಶಗಳೇ ಪರಿಹಾರ ಕಂಡುಕೊಳ್ಳಲಿ ಎಂದ ಟ್ರಂಪ್‌

ಭಾರತ ಮತ್ತು ಪಾಕಿಸ್ತಾನ ಇದನ್ನು ಅರ್ಥಮಾಡಿಕೊಳ್ಳಲಿ ಎಂದು ಟ್ರಂಪ್ ಹೇಳುತ್ತಾರೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದೆ  ಹಾಗೂ ಆ ದೇಶಗಳು  ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

"ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ  ಜತೆಗೆ ಪಾಕಿಸ್ತಾನಕ್ಕೂ ತುಂಬಾ ಹತ್ತಿರವಾಗಿದ್ದೇನೆ, ನಿಮಗೆ ತಿಳಿದಿರುವಂತೆ  ಮತ್ತು ಅವರು ಕಾಶ್ಮೀರದಲ್ಲಿ 1,000 ವರ್ಷಗಳಿಂದ ಆ ಹೋರಾಟವನ್ನು  ನಡೆಸುತ್ತಿದ್ದಾರೆ.  ಆದರೆ ಭಯೋತ್ಪಾದಕರ ದಾಳಿಗೆ  30 ಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಬೇಸರದ ವಿಷಯ," ಎಂದು ಟ್ರಂಪ್ ರೋಮ್‌ಗೆ ಹೋಗುವ ದಾರಿಯಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಮತ್ತು ಟ್ರಂಪ್‌ ಎರಡು ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದಾಗ ಅವರು ಈ ಮೇಲಿನಂತೆ ತಿಳಿಸಿದರು.

"ಆ ಗಡಿಯಲ್ಲಿ 1,500 ವರ್ಷಗಳಿಂದ ಉದ್ವಿಗ್ನತೆ ಇರುವುದು ನಿಮಗೆ ತಿಳಿದಿದೆ. ಅದು ಈಗಲೂ ಮುಂದುವರಿದಿದೆ.  ಆ ದೇಶಗಳೇ ಆ ಸಮಸ್ಯೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಸರಿಪಡಿಸುತ್ತಾರೆ ಎನ್ನುವುದು  ನನಗೆ ಖಚಿತವಾಗಿದೆ.  ನನಗೆ ಇಬ್ಬರೂ ನಾಯಕರು ಗೊತ್ತು. ಪಾಕಿಸ್ತಾನ ಮತ್ತು ಭಾರತದ ನಡುವೆ ದೊಡ್ಡ ಉದ್ವಿಗ್ನತೆ ಇದೆ. ಆದರೆ ಯಾವಾಗಲೂ ಇದೆ" ಎಂದು ಅವರು ಹೇಳಿದರು.

Update: 2025-04-26 05:48 GMT

Linked news