'ಆಪರೇಷನ್ ಸಿಂಧೂರ್' ಅನ್ನು ಪಕ್ಷಾತೀತವಾಗಿ ಶ್ಲಾಘಿಸಿದ ರಾಜಕೀಯ ನಾಯಕರು

'ಆಪರೇಷನ್ ಸಿಂಧೂರ್' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಸಶಸ್ತ್ರ ಪಡೆಗಳನ್ನು ಎಲ್ಲಾ ರಾಜಕೀಯ ನಾಯಕರು ಪಕ್ಷತೀತವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಹಿಂದ್' ದೇಶಭಕ್ತಿಯ ಘೋಷಣೆಗಳನ್ನು ಪೋಸ್ಟ್ ಮಾಡಿದ್ದಾರೆ.

"ಭಾರತ್ ಮಾತಾ ಕಿ ಜೈ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೋಸ್ಟ್‌ ಮಾಡಿದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಪರೇಷನ್ ಸಿಂಧೂರ್ ಅನ್ನು "ಜೈ ಹಿಂದ್" ಮತ್ತು "ಜೈ ಹಿಂದ್ ಕಿ ಸೇನಾ" ಎಂದು ಸ್ವಾಗತಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಪಡುವುದಾಗಿ ಹೇಳಿದರು ಮತ್ತು "ಜೈ ಹಿಂದ್" ಎಂಬ ಘೋಷಣೆಯೊಂದಿಗೆ ಪೋಸ್ಟ್‌ ಮಾಡಿದ್ದಾರೆ. 

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು "ಜೈ ಹಿಂದ್. ಆಪರೇಷನ್ ಸಿಂಧೂರ್" ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು "ಜೈ ಹಿಂದ್" ಎಂದು ಪೋಸ್ಟ್ ಮಾಡಿದ್ದಾರೆ. ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, "ಸತ್ಯಮೇವ್ ಜಯತೇ. ಜೈ ಹಿಂದ್ ಕಿ ಸೇನಾ" ಎಂದು ಹೇಳಿದರು.

ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಆರ್‌ಜೆಡಿ ನಾಯಕರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿ, "ಭಾರತೀಯ ಸೇನಾ ಜಿಂದಾಬಾದ್. ಜೈ ಹಿಂದ್" ಎಂದು ಸ್ವಾಗತಿಸಿದರು.

Update: 2025-05-07 07:08 GMT

Linked news