93 ಮೃತದೇಹಗಳು ಪತ್ತೆ: ಪಿಣರಾಯಿ ವಿಜಯನ್ಈವರೆಗೆ 93... ... Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ
93 ಮೃತದೇಹಗಳು ಪತ್ತೆ: ಪಿಣರಾಯಿ ವಿಜಯನ್
ಈವರೆಗೆ 93 ಮೃತದೇಹಗಳು ಪತ್ತೆಯಾಗಿದ್ದು, 128 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಪೋತುಕಲ್ಲು ಬಳಿಯ ಚಾಲಿಯಾರ್‌ನಲ್ಲಿ ಸುಮಾರು 16 ಶವಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ದೇಹದ ಭಾಗಗಳೂ ಪತ್ತೆಯಾಗಿವೆ. 34 ಮೃತದೇಹಗಳನ್ನು ಗುರುತಿಸಲಾಗಿದೆ. 18 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಇದು ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ದುರಂತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಂದು ಮುಂಜಾನೆ 2 ಗಂಟೆಗೆ ಇಲ್ಲಿ ಮೊದಲ ಭೂಕುಸಿತ ಸಂಭವಿಸಿದೆ. ಅದರ ನಂತರ 4:10ಕ್ಕೆ ಮತ್ತೊಂದು ಭೂಕುಸಿತ ಸಂಭವಿಸಿದೆ. ಮೆಪ್ಪಾಡಿ, ಮುಂಡಕ್ಕೈ, ಚೂರಲ್‌ಮಲಾ ಸೇರಿದಂತೆ ಹಲವು ಪ್ರದೇಶಗಳು ಸಂಪರ್ಕ ಕಡಿತಗೊಂಡಿದ್ದು, ಚೂರಲ್‌ಮಲಾ-ಮುಂಡಕ್ಕೈ ರಸ್ತೆ ಕೊಚ್ಚಿಹೋಗಿದೆ. ಇಲ್ಲಿನ ವೆಳ್ಳರ್ಮಲಾ ಜಿವಿಎಚ್ ಶಾಲೆ ಸಂಪೂರ್ಣ ಕೆಸರಿನಲ್ಲಿ ಹೂತು ಹೋಗಿದೆ. ಇರುವ ಜಿಂಜಿಪ್ಪುಳ ನದಿ ಎರಡು ದಿಕ್ಕುಗಳಲ್ಲಿ ಹರಿಯುತ್ತಿದೆ. ಮನೆಗಳಿಗೆ ಮತ್ತು ಜೀವನೋಪಾಯಕ್ಕೆ ಭಾರಿ ಹಾನಿಯಾಗಿದೆ. ಕೆಸರಿನಡಿ ಸಿಲುಕಿ ಪ್ರವಾಹಕ್ಕೆ ಕೊಚ್ಚಿ ಹೋದವರು ಇನ್ನೂ ಇದ್ದಾರೆ. ಅವರನ್ನು ಹುಡುಕುವ ಪ್ರಯತ್ನ ಮುಂದುವರಿಯಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.