ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ... ... Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ

ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿ: ಡಾ. ಸಿಎನ್‌ ಮಂಜುನಾಥ್‌

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್‌ ಮಂಜುನಾಥ್‌ ಅವರು ಇಂದು ಪದ್ಮನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻವಿಕಸಿತ ಭಾರತ ನಿರ್ಮಾಣಕ್ಕಾಗಿ ನಮ್ಮ ಹಕ್ಕು ಚಲಾಯಿಸಿದೆವು. ನಾನು ಮತ್ತು ಧರ್ಮಪತ್ನಿ ಡಾ. ಅನಸೂಯಾ ಮಂಜುನಾಥ್ ಹಾಗೂ ಮಕ್ಕಳು ಇಂದು ಪದ್ಮನಾಭ ನಗರದಲ್ಲಿ ಮತ ಚಲಾಯಿಸಿದೆವು. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿʼʼ ಎಂದು ಕರೆ ನೀಡಿದರು.

ʻʻನಿಮ್ಮ ಒಂದೊಂದು ಮತವೂ ಭಾರತದ ಅಭ್ಯುದಯಕ್ಕೆ ಅಡಿಪಾಯವಾಗಲಿದೆ. ಇಂದು ಹಾಗೂ ಮೇ ಏಳರಂದು ಈ ಬಾರಿ ಕರ್ನಾಟಕದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಉಜ್ವಲ ಭಾರತದ ನಿರ್ಮಾಣಕ್ಕೆ ನಾಂದಿ ಹಾಡೋಣʼʼ ಎಂದು ಬರೆದಿದ್ದಾರೆ.

Update: 2024-04-26 09:37 GMT

Linked news