ನಟ ಪ್ರಕಾಶ್ ರಾಜ್ ಮತದಾನಬೆಂಗಳೂರಿನ ಮತಗಟ್ಟೆಯಲ್ಲಿ ನಟ... ... Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ

ನಟ ಪ್ರಕಾಶ್ ರಾಜ್ ಮತದಾನ

ಬೆಂಗಳೂರಿನ ಮತಗಟ್ಟೆಯಲ್ಲಿ ನಟ ಪ್ರಕಾಶ್ ರಾಜ್ ಮತದಾನ ಮಾಡಿದರು. ಮತ ಚಲಾಯಿಸಿದ ನಂತರ ಮಾತನಾಡಿದ ನಟ, "ನನ್ನ ಮತ ನನ್ನ ಹಕ್ಕು. ನನ್ನನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ನನ್ನ ಶಕ್ತಿಗಾಗಿ, ಸಂಸತ್ತಿನಲ್ಲಿ ಯಾರು ನನ್ನ ಧ್ವನಿ ಎತ್ತುತ್ತಾರೆಯೋ ಅವರಿಗೆ ನನ್ನ ಮತ. ನೀವು ನಂಬುವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಾನು ನಂಬಿದ ಅಭ್ಯರ್ಥಿಗೆ ಮತ್ತು ಅವರು ತಂದ ಪ್ರಣಾಳಿಕೆಗೆ ಮತ್ತು ಬದಲಾವಣೆಗಾಗಿ ನಾನು ಮತ ಹಾಕಿದ್ದೇನೆ. ಏಕೆಂದರೆ ಕಳೆದ ದಶಕದಿಂದ ನಾವು ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ನೋಡುತ್ತಿದ್ದೇವೆʼʼ ಎಂದರು.

Update: 2024-04-26 04:02 GMT

Linked news