ಇರಾನ್‌ ಮೇಲಿನ ಯುಎಸ್‌ ದಾಳಿಗಳು ಲೆಕ್ಕಕ್ಖೇ ಇಲ್ಲ: ಚೀನಾ... ... Israel-Iran conflict: ಅಮೆರಿಕ ದಾಳಿಗೆ ಪ್ರತೀಕಾರದ ಪಣತೊಟ್ಟ ಇರಾನ್

ಇರಾನ್‌ ಮೇಲಿನ ಯುಎಸ್‌ ದಾಳಿಗಳು ಲೆಕ್ಕಕ್ಖೇ ಇಲ್ಲ: ಚೀನಾ ಖಂಡನೆ

ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕಾ ನಡೆಸಿದ ಬಾಂಬ್ ದಾಳಿಗಳನ್ನು ಚೀನಾದ ಅಧಿಕೃತ ಮಾಧ್ಯಮಗಳು ಭಾನುವಾರ ತೀವ್ರವಾಗಿ ಟೀಕಿಸಿವೆ. ಇದು "ತೀವ್ರ ಅನರ್ಥದ ಕಡೆಗೆ ಮತ್ತೊಂದು ಹೆಜ್ಜೆ" ಎಂದು ಬಣ್ಣಿಸಿರುವ ಚೀನಾದ ತಜ್ಞರು, ಅಮೆರಿಕಾದ ಬಂಕರ್-ಬಸ್ಟರ್ ಬಾಂಬ್‌ಗಳು ಇರಾನ್‌ನ ಗುಡ್ಡದ ಅಡಿಯಲ್ಲಿ ಆಳವಾಗಿರುವ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅಮೆರಿಕಾ ಭಾನುವಾರ ಬೆಳಗ್ಗೆ ಇರಾನ್‌ನ ಫೋರ್ಡೋ, ಇಸ್ಫಹಾನ್ ಮತ್ತು ನತಾನ್ಜ್ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿ, ದೇಶದ ಪರಮಾಣು ಯೋಜನೆಯನ್ನು ನಾಶಪಡಿಸುವ ಪ್ರಯತ್ನ ಮಾಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಸೇನೆಯು ಮೂರು ಪರಮಾಣು ಘಟಕಗಳ ಮೇಲೆ "ಅತ್ಯಂತ ಯಶಸ್ವೀ" ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಪರಮಾಣು ಘಟಕಗಳ ಮೇಲಿನ ದಾಳಿಯಲ್ಲಿ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಲಾಗಿತ್ತು.

Update: 2025-06-22 10:57 GMT

Linked news