ಅಮೆರಿಕಾ ಅಸಾಧ್ಯವಾದುದನ್ನು ಮಾಡಿದೆ"; ಶಾಂತಿಗೆ ಕರೆ ನೀಡಿದ... ... Israel-Iran conflict: ಅಮೆರಿಕ ದಾಳಿಗೆ ಪ್ರತೀಕಾರದ ಪಣತೊಟ್ಟ ಇರಾನ್

ಅಮೆರಿಕಾ ಅಸಾಧ್ಯವಾದುದನ್ನು ಮಾಡಿದೆ"; ಶಾಂತಿಗೆ ಕರೆ ನೀಡಿದ ಟ್ರಂಪ್

ಇರಾನ್‌ನ ಪರಮಾಣು ತಾಣಗಳ ಮೇಲಿನ ಅಮೆರಿಕಾದ ದಾಳಿಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಾವನ್ನು ಶ್ಲಾಘಿಸಿದ್ದಾರೆ. ಅಮೆರಿಕಾ "ಭೂಮಿಯ ಮೇಲಿನ ಯಾವುದೇ ದೇಶ ಮಾಡಲಾಗದ ಕೆಲಸವನ್ನು ಮಾಡಿದೆ" ಎಂದು ನೆತನ್ಯಾಹು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಮೂರು ಪರಮಾಣು ಸಂವರ್ಧನಾ ಸೌಲಭ್ಯಗಳಾದ ಫಾರ್ಡೋ, ನತಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿಗಳನ್ನು ಘೋಷಿಸಿದ್ದಾರೆ. ಫಾರ್ಡೋ ತಾಣದ ಮೇಲೆ "ಬಾಂಬ್‌ಗಳ ಸಂಪೂರ್ಣ ದಾಸ್ತಾನು" (full payload of BOMBS) ಹಾಕಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, "ಎಲ್ಲಾ ವಿಮಾನಗಳು ಸುರಕ್ಷಿತವಾಗಿ ತಮ್ಮ ನೆಲೆಯನ್ನು ತಲುಪುತ್ತಿವೆ," ಎಂದು ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಮಹಾನ್ ಅಮೆರಿಕನ್ ಯೋಧರಿಗೆ ಅಭಿನಂದನೆಗಳು. ವಿಶ್ವದಲ್ಲಿ ಇದನ್ನು ಮಾಡಲು ಸಾಧ್ಯವಿರುವ ಮತ್ತೊಂದು ಸೇನೆ ಇಲ್ಲ. ಈಗ ಶಾಂತಿಯ ಸಮಯ!" ಎಂದು ಅವರು ಬರೆದುಕೊಂಡಿದ್ದಾರೆ. ಈ ಹೇಳಿಕೆಗಳು ಇರಾನ್ ವಿರುದ್ಧದ ಅಮೆರಿಕಾದ ನಿರ್ಧಾರಿತ ಕ್ರಮಗಳನ್ನು ಮತ್ತು ಮುಂದಿನ ರಾಜತಾಂತ್ರಿಕ ಪ್ರಯತ್ನಗಳ ಕಡೆಗೆ ಇರುವ ನಿಲುವನ್ನು ಪ್ರತಿಬಿಂಬಿಸುತ್ತವೆ. 

Update: 2025-06-22 05:18 GMT

Linked news