ಇರಾನ್ ಮೇಲೆ ದಾಳಿಗೆ 'ತಂಡವಾಗಿ' ಕೆಲಸ ಮಾಡಿದ್ದೇವೆ ಎಂದ... ... Israel-Iran conflict: ಅಮೆರಿಕ ದಾಳಿಗೆ ಪ್ರತೀಕಾರದ ಪಣತೊಟ್ಟ ಇರಾನ್
ಇರಾನ್ ಮೇಲೆ ದಾಳಿಗೆ 'ತಂಡವಾಗಿ' ಕೆಲಸ ಮಾಡಿದ್ದೇವೆ ಎಂದ ಟ್ರಂಪ್
ಇರಾನ್ ಮೇಲಿನ ಇತ್ತೀಚಿನ ದಾಳಿಗಳ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ತಾವು "ತಂಡವಾಗಿ" ಕಾರ್ಯನಿರ್ವಹಿಸಿ ಈ ಕಾರ್ಯಾಚರಣೆಯನ್ನು ನಡೆಸಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಸಹಕಾರವು "ಬಹುಶಃ ಹಿಂದೆಂದೂ ಯಾವ ತಂಡವೂ ಕೆಲಸ ಮಾಡಿರದಂತಹದ್ದು" ಎಂದು ಬಣ್ಣಿಸಿದ್ದಾರೆ.
ಅಮೆರಿಕಾ ಸೇನೆಯನ್ನು ಹೊರತುಪಡಿಸಿ ವಿಶ್ವದ ಬೇರೆ ಯಾವುದೇ ಸೇನೆಯಿಂದ ಇಂತಹ ದಾಳಿಯನ್ನು ನಡೆಸುವುದು ಅಸಾಧ್ಯ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಇರಾನ್ ಅನ್ನು "ಮಧ್ಯಪ್ರಾಚ್ಯದ ಬೆದರಿಕೆಯ ಶಕ್ತಿ" ಎಂದು ಕರೆದ ಅವರು, ಇರಾನ್ ಶಾಂತಿಗೆ ಸಿದ್ಧವಾಗದಿದ್ದರೆ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಗಳು ಇಸ್ರೇಲ್-ಅಮೆರಿಕಾ ಮೈತ್ರಿ ಮತ್ತು ಇರಾನ್ ವಿರುದ್ಧದ ಅವರ ಕಠಿಣ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ.
Update: 2025-06-22 05:13 GMT