ದೆಹಲಿ ವಿಮಾನ ನಿಲ್ದಾಣದ ಪ್ರಕಟನೆ

ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿದ್ದರೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಮಧ್ಯೆ ವಾಯುಪ್ರದೇಶದ ಪರಿಸ್ಥಿತಿಗಳು ಬದಲಾಗುತ್ತಿರುವುದರಿಂದ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡಂತೆ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (IGIA) ನಿರ್ವಹಿಸುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL), ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿವೆ. ಆದರೂ, ವಾಯುಪ್ರದೇಶದ ಪರಿಸ್ಥಿತಿಗಳು ಮತ್ತು ಕೆಲವೊಂದು ಭದ್ರತಾ ಕ್ರಮಗಳಿಂದಾಗಿ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಆದೇಶಗಳ ಪ್ರಕಾರ, ಕೆಲವು ವಿಮಾನ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಭದ್ರತಾ ಚೆಕ್‌ಪಾಯಿಂಟ್ ಪ್ರಕ್ರಿಯೆಯ ಸಮಯವು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. 

ಭದ್ರತಾ ತಪಾಸಣೆಗಳಲ್ಲಿ ಸಂಭವನೀಯ ವಿಳಂಬವನ್ನು ನಿಭಾಯಿಸಲು ಪ್ರಯಾಣಿಕರು ಬೇಗನೆ ಬರುವಂತೆ ಸೂಚಿಸಲಾಗಿದೆ. ಸುಗಮ ಸೌಲಭ್ಯಕ್ಕಾಗಿ ವಿಮಾನಯಾನ ಸಂಸ್ಥೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದೆ.  ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ 138 ವಿಮಾನಗಳನ್ನು ವಿವಿಧ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ.

Update: 2025-05-10 04:53 GMT

Linked news

Operation Sindoor | ಸಹಜ ಸ್ಥಿತಿಗೆ ಮರಳಿದ ಜಮ್ಮು ಕಾಶ್ಮೀರ ; ಭದ್ರತಾ ಪಡೆಗಳಿಂದ ಹದ್ದಿನಕಣ್ಣು