ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದಕ್ಕೆ ಪ್ರಧಾನಿ ಮೋದಿ... ... Pahalgam LIVE:: ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳ ಮೇಲೆ ನಿಷೇಧ ಹೇರಿದ ಭಾರತ

ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

"ದೇಶದ ಹೆಮ್ಮೆಗೆ ಧಕ್ಕೆಯಾದಾಗ, ನೀವು (ಪ್ರಧಾನಿ ಮೋದಿ) ಬಿಹಾರದಲ್ಲಿ ಚುನಾವಣಾ ಭಾಷಣ ಮಾಡಿರುವುದ ದೇಶದ ದೌರ್ಭಾಗ್ಯ" ಎಂದು ಅವರು ಇಲ್ಲಿ 'ಸಂವಿಧಾನ್ ಬಚಾವೋ' ರ್ಯಾಲಿಯನ್ನು ಉದ್ದೇಶಿಸಿ ಹೇಳಿದ್ದಾರೆ.

"ಎಲ್ಲಾ ಪಕ್ಷಗಳ ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಪ್ರಧಾನಿ ಮೋದಿ ಆ ಸಭೆಗೆ ಬರದಿರುವುದು ಬೇಸರದ ಸಂಗತಿ. ಬಿಹಾರ ಬಹಳ ದೂರದಲ್ಲಿತ್ತೇ? ಪ್ರಧಾನಿಯವರು ಸರ್ವಪಕ್ಷ ಸಭೆಗೆ ಬಂದು ಯೋಜನೆಯನ್ನು ವಿವರಿಸಬೇಕಿತ್ತು. ಅವರಿಗೆ ನಮ್ಮಿಂದ ಏನು ಸಹಾಯ ಬೇಕು?" ಎಂದು ಅವರು ಪ್ರಶ್ನಿಸಿದರು.

ಪ್ರಧಾನಿಯ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, "ಮೋದಿ ಹಣದುಬ್ಬರ ಮತ್ತು ನಿರುದ್ಯೋಗವನ್ನು ನೀಡಿದರು. ಅಂತಹ ಜನರು ದೇಶವನ್ನು ದುರ್ಬಲಗೊಳಿಸುತ್ತಾರೆ. 56 ಇಂಚಿನ ಎದೆ ಕುಗ್ಗಿದೆ ಎಂದು ಹೇಳಿದ್ದಾರೆ. 

Update: 2025-04-28 10:27 GMT

Linked news