ಕಾಲ್ತುಳಿತದ ದುರಂತಕ್ಕೆ ಸರ್ಕಾರ ನೇರ ಕಾರಣ: ಆರ್.‌ ಅಶೋಕ್‌

 

ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತದಲ್ಲಿ 11 ಜನರ ಸಾವಿಗೆ ಸರ್ಕಾರವೇ ನೇರ ಹೊಣೆ. ಮಜಾವಾದಿ ಸಿದ್ದರಾಮಯ್ಯ, ಐಪಿಎಲ್ ಗೆದ್ದಿದ್ದು ಆರ್‌ಸಿಬಿ ತಂಡ, ಆದರೆ ಕಪ್ ತೆಗೆದುಕೊಂಡು ಸಂಭ್ರಮಿಸಿದ್ದು ಕೆಪಿಸಿಸಿ. ಸಿದ್ದರಾಮಯ್ಯ ಬ್ಯಾಟಿಂಗ್ ಡಿಕೆಶಿ ಬೌಲಿಂಗ್ ಮಾಡಿದರು ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ರನ್ನೌಟ್ ಮಾಡಿಸಲು ಡಿಕೆಶಿ ರನ್ನೌಟ್ ಮಾಡಲು ಹೊರಟರು. ಆತುರ ಆತುರಾವಾಗಿ ಸರ್ಕಾರ ಕಾರ್ಯಕ್ರಮ ಮಾಡಿತು. ಕಾಂಗ್ರೆಸ್ ಸಮಾವೇಶವ ಮಾಡಲು ಮೂರು ದಿನಗಳ ಮೊದಲೇ ತಯಾರಿ ನೋಡಲು ಸಿಎಂ ಹಾಗು ಡಿಸಿಎಂ ಹೋಗಿದ್ದರು. ಆದರೆ ಆರ್‌ಸಿಬಿ ಸಂಭ್ರಮಾಚರಣೆ ತಯಾರಿಗೆ ಒಂದು ಗಂಟೆ ಸಮಯ ನೀಡಲಿಲ್ಲ. ಪೊಲೀಸರ ಪರವಾಗಿ ಜನ ಅಭಿಯಾನ ಶುರುಮಾಡಿದ್ದಾರೆ. ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಹೌದು ನಾವು ನ್ಯಾಯ ಸಿಗುವವರೆಗೆ ರಾಜಕಾರಣ ಮಾಡುತ್ತೇವೆ ಎಂದು ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದ್ದಾರೆ. 

Update: 2025-06-06 06:20 GMT

Linked news