ಧರ್ಮಸ್ಥಳ ಪ್ರಕರಣ: ಮಧ್ಯಂತರ ವರದಿಗೆ ಬಿ.ವೈ. ವಿಜಯೇಂದ್ರ ಆಗ್ರಹ
ಪೊಲೀಸರು ಮೊದಲು ಮುಸುಕುದಾರಿ ಕುರಿತು ತನಿಖೆ ಮಾಡಬೇಕು. ಸರ್ಕಾರ ಮೊದಲು ಎಸ್‌ಐಟಿ ತನಿಖೆ ಮಾಡಲ್ಲ ಎಂದರು. ಆದರೆ ನಂತರ ಮಾಡಿದರು. ಸಿಎಂ ಮೇಲೆ ಯಾರು ಒತ್ತಡ ಹಾಕಿದರು ಎಂದು ತಿಳಿಸಿಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ಎಸ್‌ಐಟಿ ನಡೆಸುತ್ತಿರುವ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಹಿಟ್ ಅಂಡ್ ರನ್ ಕೇಸ್ ಆಗಲು ಬಿಡಬಾರದು. ಶೀಘ್ರವೇ ಸರ್ಕಾರ ಮಧ್ಯಂತರ ವರದಿಯನ್ನು ಸದನಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
Update: 2025-08-14 09:25 GMT