ಭೂಸ್ವಾಧೀನ ಬೆಂಬಲಿಸಿದ್ದ ಸಚಿವದ್ವಯರಿಗೆ ಮುಖಭಂಗ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ರೈತರಲ್ಲಿ ಸಂಭ್ರಮ ಗರಿಗೆದರಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಿಂದ ದೂರ ಸರಿಯಲು ಇಷ್ಟಪಡದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ನಿರಾಶೆ ಎದುರಾಗಿದೆ.
ಸಿಎಂ ಪತ್ರಿಕಾಗೋಷ್ಠಿ ವೇಳೆ ಉಭಯ ಸಚಿವರ ಮುಖಭಾವ ಹಾಗೂ ಸಿಎಂ ಅವರ ನಗುಮೊಗದ ಪ್ರತಿಕ್ರಿಯೆ ತೀವ್ರ ವೈರಲ್ ಆಗುತ್ತಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿಯ ಮುಖಂಡರು ಕೂಡ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಈ ಕುರಿತು ವ್ಯಂಗ್ಯವಾಡಿದ್ದಾರೆ.
Update: 2025-07-15 10:18 GMT