ದಸರಾ ಉದ್ಘಾಟನೆ| ಸಿ.ಎಂ ಅವರನ್ನು ಹಾಡಿಹೊಗಳಿದ ಶಾಸಕ ಜಿ.ಟಿ. ದೇವೇಗೌಡ
ವಿಶ್ವವಿಖ್ಯಾತ ಐತಿಹಾಸಿಕ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಮ್ಮ ಭಾಷಣದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯ 1983ರಲ್ಲಿ ಶಾಸಕರಾಗಿ ಆರಂಭಿಸಿ, ಸಚಿವ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ದೇವರಾಜ ಅರಸು ಅವರು 45 ವರ್ಷಗಳ ರಾಜಕೀಯ ಸೇವೆ ಸಲ್ಲಿಸಿದಂತೆ, ಸಿದ್ದರಾಮಯ್ಯ ಅವರೂ ಅದೇ ರೀತಿ ಸಾಗುತ್ತಿದ್ದಾರೆ. ಇದು ಮೈಸೂರು ಪ್ರದೇಶದ ಜನರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
Update: 2025-09-22 07:51 GMT