ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ; ಸಿ.ಎಂ ಸಿದ್ದರಾಮಯ್ಯ

ಮನುಷ್ಯತ್ವವನ್ನು ಒಪ್ಪಿಕೊಳ್ಳುವ ನಾವು, ನಾಡಹಬ್ಬದ ಉದ್ಘಾಟನೆಯನ್ನು ಸ್ವಾಗತಿಸಬೇಕು. ಈ ನಾಡಿನ ಬಹುಸಂಖ್ಯಾತರು, ಮೈಸೂರಿನ ಅರಸರು, ಈ ಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಳಿಸಿದರು. 

ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ʻʻಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಓದಬೇಕು. ನಮ್ಮ ಹಕ್ಕುಗಳ ಜೊತೆಗೆ ಜವಾಬ್ದಾರಿಗಳು ಕೂಡ ಜೊತೆಜೊತೆಗೆ ಇರಬೇಕು" ಎಂದು ತಿಳಿಸಿದರು.

ಮುಂದಿನ ಪೀಳಿಗೆಯನ್ನು ದಾರಿ ತಪ್ಪಿಸಬಾರದು ಮತ್ತು ಇತಿಹಾಸವನ್ನು ಸ್ವಾರ್ಥಕ್ಕಾಗಿ ಅಥವಾ ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು. ಹಾಗೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಅವರು ಖಂಡಿಸಿದರು. ರಾಜಕೀಯವನ್ನು ಚುನಾವಣೆಯಲ್ಲಿ ಮಾಡೋಣ, ಆದರೆ ದ್ವೇಷಕ್ಕಾಗಿ ಅಥವಾ ಓಲೈಕೆಗಾಗಿ ರಾಜಕೀಯ ಮಾಡುವುದು ಸರಿಯಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅವರು ತಿಳಿಸಿದರು. 

Update: 2025-09-22 06:31 GMT

Linked news