ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಪೊಲೀಸ್ ಇಲಾಖೆಯ ಕೈವಾಡದ ಬಗ್ಗೆ ಅಶೋಕ್ ಅನುಮಾನ
ಸುಹಾಸ್ ಶೆಟ್ಟಿ ಕೊಲೆಯ ಹಿಂದೆ ಪೊಲೀಸ್ ಇಲಾಖೆಯ ಕೈವಾಡ ಇರಬಹುದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಯ ಬಗ್ಗೆ ಮಾಹಿತಿ ಕೊಟ್ಟವರು ಯಾರು, ಸುಹಾಸ್ ಶೆಟ್ಟಿ ಎಲ್ಲಿ ಹೋಗುತ್ತಾರೆ, ಅವರ ಬಳಿ ಯಾವುದೇ ಆಯುಧ ಇಲ್ಲ ಎಂದು ಮಾಹಿತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಇಲಾಖೆಯ ಕೈವಾಡ ಇರಬಹುದು. ಘಟನೆಗೆ ಸಿದ್ದರಾಮಯ್ಯ ಸರ್ಕಾರವೇ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ದೇಶದ್ರೋಹಿಗಳಿಗೆ ಗುಂಡಿಡುವ ಕಾನೂನು ಬರಬೇಕು ಎಂದು ಒತ್ತಾಯಿಸಿದ್ದಾರೆ.
Update: 2025-05-02 06:40 GMT