ತ್ಯಾಜ್ಯ ಮಾಫಿಯಾ ನಿಯಂತ್ರಿಸಲು ಆಡಳಿತ-ಪ್ರತಿಪಕ್ಷಗಳು ವಿಫಲ: ಡಿಕೆಶಿ

ಬೆಂಗಳೂರನ್ನು ಗಾರ್ಬೆಜ್ ಸಿಟಿ ಎಂದು ಶಾಸಕ ಅಶ್ವಥ್ ನಾರಾಯಣ್‌ ಹೇಳಿದ್ದಾರೆ, ಈ ರೀತಿಯ ಕಸದ ಸಮಸ್ಯೆ ಯಾವ ಕಾಲದಲ್ಲಿಯೂ ಇರಲಿಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು. 

ಶುಕ್ರವಾರ ಸದನದಲ್ಲಿ ಮಾತನಾಡಿದ ಅವರು, ಮಳೆ ಹೆಚ್ಚಾಗಿ ಬಂದರೆ ದೆಹಲಿ, ಗುಜರಾತ್‌, ಬಿಹಾರಗಳಲ್ಲಿ ಕಾರುಗಳು ತೆಲಿ ಹೋಗುತ್ತವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಪರವಾಗಿಲ್ಲ. ತ್ಯಾಜ್ಯ ಒಂದು ದೊಡ್ಡ ಮಾಫಿಯಾ, ಆ ಮಾಫಿಯಾವನ್ನು ನಿಯಂತ್ರಿಸಲು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ವಿಫಲವಾಗಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

 

Update: 2025-08-22 08:56 GMT

Linked news