'ಕಿವಿಗಡಚಿಕ್ಕುವ ಸದ್ದು, ಮುಗಿಲೆತ್ತರಕ್ಕೆ... ... ದೆಹಲಿಯ ಕೆಂಪುಕೋಟೆ ಬಳಿ ಕಾರಿನಲ್ಲಿ ಸ್ಫೋಟ: ಎಂಟು ಸಾವು; 24 ಮಂದಿಗೆ ಗಾಯ

 'ಕಿವಿಗಡಚಿಕ್ಕುವ ಸದ್ದು, ಮುಗಿಲೆತ್ತರಕ್ಕೆ ಜ್ವಾಲೆ!'

"ಏನೋ ಕಿವಿಗಡಚಿಕ್ಕುವ ಸದ್ದು ಕೇಳಿಸಿತು, ನಾವು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿಯೇ, ಕಣ್ಣೆದುರೇ ಕಾರೊಂದು ಅಗ್ನಿಕುಂಡವಾಗಿತ್ತು. ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಏರುತ್ತಿದ್ದವು," ಎಂದು ಸ್ಫೋಟ ನಡೆದ ಸ್ಥಳದ ಸಮೀಪದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಆತಂಕದಿಂದ ನುಡಿದಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸಮೀಪದ ಬೀದಿ ದೀಪಗಳು ಸಹ ಕಂಪಿಸತೊಡಗಿದವು, ಕೆಲವು ದೀಪಗಳು ಸ್ಫೋಟದ ರಭಸಕ್ಕೆ ಹಾನಿಗೊಳಗಾದವು ಎಂದು ಮತ್ತೊಬ್ಬರು ವಿವರಿಸಿದ್ದಾರೆ. "ಕಣ್ಣೆದುರೇ ವಾಹನಗಳು ಧಗಧಗನೆ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ಕಂಡು, ಜೀವ ಉಳಿಸಿಕೊಳ್ಳಲು ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಆ ಕ್ಷಣವನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ," ಎಂದು ಘಟನೆಯ ಭೀಕರತೆಯನ್ನು ಅವರು ಬಿಚ್ಚಿಟ್ಟರು.

Update: 2025-11-10 14:49 GMT

Linked news