About Us

ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್.

ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.

ತೀವ್ರ ಅಭಿಪ್ರಾಯಗಳ ಸಮಾಜದಲ್ಲಿ ಸುದ್ದಿಯ ಸಮತೋಲನ ಕಾಯ್ದುಕೊಂಡು, ವಿವೇಕದ ಧ್ವನಿಗಳ ಪ್ರಸರಣದ ಪ್ರಯತ್ನ ದ ಫೆಡರಲ್‌ನದು.

ಸಾಮಾಜಿಕ ಮಾಧ್ಯಮಗಳ ಭರಾಟೆ ಹಾಗೂ ತಂತ್ರಜ್ಞಾನದ ಪ್ರಭಾವದಿಂದ ಮಾಧ್ಯಮ ಕ್ಷೇತ್ರದ ಆಯಾಮಗಳೇ ಇಂದು ಬದಲಾಗಿವೆ. ಈ ಬದಲಾದ ಸನ್ನಿವೇಶವನ್ನು ಒಪ್ಪಿಕೊಂಡೇ ಪಕ್ಷಾತೀತ ಪತ್ರಿಕೋದ್ಯಮಕ್ಕೆÀ ದ ಫೆಡರಲ್ ಬದ್ಧ.

ನುರಿತ ಅನುಭವಿ ಪತ್ರಕರ್ತರು, ಲೇಖಕರು, ದತ್ತಾಂಶ ವಿಶ್ಲೇಷಕರು, ವಿನ್ಯಾಸಕಾರರು, ತಂತ್ರಜ್ಞರೆಲ್ಲರನ್ನು ಒಗ್ಗೂಡಿಸಿ, ವಿಶ್ವಾಸಾರ್ಹ ಸುದ್ದಿಗಳನ್ನು ಪ್ರಕಟಿಸಲು ಹೊಸ ಮಾರ್ಗಗಳ ಹುಡುಕಾಟ ದ ಫೆಡರಲ್‌ನದು.

ಹಲವು ಮುದ್ರಣ ಹಾಗೂ ಮಾಧ್ಯಮಗಳಿಗೆ ವೇದಿಕೆಯಾಗಿರುವ ನ್ಯೂಜನರೇಷನ್ ಮೀಡಿಯಾ ಕಾರ್ಪೊರೇಷನ್ ಪ್ರೆöÊವೇಟ್ ಲಿಮಿಟೆಡ್‌ನ ‘ಪುತಿಯ ತಲೈಮುರೈ’ತಮಿಳಿನ ಮುಂಚೂಣಿಯಲ್ಲಿರುವ ಸುದ್ದಿ ಟಿವಿ ಚಾನೆಲ್. 2011ರಲ್ಲಿ ಆರಂಭವಾದ ಈ ಸುದ್ದಿ ಚಾನೆಲ್ ಪತ್ರಿಕೋದ್ಯಮದಲ್ಲಿ ಹೊಸಶಕೆಯನ್ನು ಆರಂಭಿಸಿದೆ. ಅಂದಿನಿAದ ಇಂದಿನವರೆಗೂ ‘ಪುತಿಯ ತಲೈಮುರೈ’ಇಂದಿಗೂ ಟಿವಿ ಮಾಧ್ಯಮ ಲೋಕದಲ್ಲಿ ಅಗ್ರಸ್ಥಾನದಲ್ಲೇ ಇದೆ.

ಈ ಸಂಸ್ಥೆಯ ‘ಪುದು ಯುಗಂ’ಎಂಬ ಮನರಂಜನಾ ಚಾನೆಲ್, ತನ್ನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನ್ಯೂಜನರೇಷನ್ ಮೀಡಿಯಾ ಕಾರ್ಪೊರೇಷನ್ ಪ್ರೆöÊವೇಟ್ ಲಿಮಿಟೆಡ್‌ನ ಮೊದಲ ಸುದ್ದಿ ಮತ್ತು ಮಾಹಿತಿ ನಿಯತಕಾಲಿಕ ‘ಪುತಿಯ ತಲೈಮುರೈ’ಆರಂಭವಾದದ್ದು 2009ರಲ್ಲಿ. ಇದರೊಂದಿಗೆ ಸಂಸ್ಥೆಯ ಮುದ್ರಣ ವಿಭಾಗವು, ಹಲವು ವಿಶಿಷ್ಟ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. ಈ ಸಂಸ್ಥೆಯ ಮೊದಲ ಇಂಗ್ಲಿಷ್ ಡಿಜಿಟಲ್ ವೇದಿಕೆ ದ ಫೆಡರಲ್ ಆರಂಭವಾದದ್ದು, 2019ರಲ್ಲಿ. ಡಿಸೆಂಬರ್ 2023ರಲ್ಲಿ ಆರಂಭವಾದ ದ ಫೆಡರಲ್ ತೆಲಂಗಾಣ ಡಿಜಿಟಲ್ ವೇದಿಕೆ ಜನಪ್ರಿಯತೆ ಗಳಿಸಿದೆ. ಇದೇ ಹಾದಿಯಲ್ಲಿ ದ ಫೆಡರಲ್ ಕರ್ನಾಟಕ ಕನ್ನಡ ಡಿಜಿಟಲ್ ಲೋಕಕ್ಕೆ ಕಾಲಿಟ್ಟಿದೆ.