x

4ನೇ ಹಂತದ ಕ್ಯಾನ್ಸರ್‌ಗೆ ನಗುತ್ತಲೇ ಸವಾಲೆಸೆದ ಪತ್ರಕರ್ತೆ; 'ಬೆಸ್ಟ್ ಕ್ಯಾನ್ಸರ್' ಎಂದ ಕೃಷ್ಣಿ ಶಿರೂರ್

18 Oct 2025 7:52 PM IST

‘ಬ್ರೆಸ್ಟ್ ಕ್ಯಾನ್ಸರ್ ಇಸ್ ದ ಬೆಸ್ಟ್ ಕ್ಯಾನ್ಸರ್’ ಎಂದು ಆತ್ಮವಿಶ್ವಾಸ ತುಂಬುವ ನುಡಿಯನ್ನು ಹಂಚಿಕೊಳ್ಳುತ್ತಾ, ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜಯಿಸಿರುವ ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರ ಇಂದು ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೇವಲ ಒಂಬತ್ತು ವರ್ಷಗಳ ಹಿಂದೆ ಸ್ಟೇಜ್–4 ಕ್ಯಾನ್ಸರ್‌ನ ಭೀಕರತೆಯನ್ನು ಎದುರಿಸಿದ್ದರೂ, ಎದೆಗುಂದದೆ ಹೋರಾಟ ನಡೆಸಿ ಚೇತರಿಸಿಕೊಂಡ ಅವರು, ಪ್ರಸ್ತುತ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ರೋಗಿಗಳಿಗೆ ಆಪ್ತ ಸಲಹೆಗಳು ಮತ್ತು ಮಾನಸಿಕ ಬೆಂಬಲವನ್ನು ಕೂಡ ಒದಗಿಸುತ್ತಿದ್ದಾರೆ.