Ethanol solution to gas shortage: Kuruburu Shanthakumars letter to Central Govt
x

ಎಐ ಆಧಾರಿತ ಚಿತ್ರ

ಗ್ಯಾಸ್ ಅಭಾವಕ್ಕೆ ಎಥೆನಾಲ್ ಪರಿಹಾರ: ಕೇಂದ್ರ ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಪತ್ರ

ಎಲ್‌ಪಿಜಿ ಬಳಕೆಯಿಂದ ಸಿಲಿಂಡರ್ ಸಿಡಿಯುವ ಅಪಾಯವಿದೆ. ಆದರೆ ಎಥೆನಾಲ್‌ ಲಿಕ್ವಿಡ್ ಆದ ಕಾರಣ ಬೆಂಕಿ ಹತ್ತಿಕೊಳ್ಳುವ ಭಯ ಇರುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.


Click the Play button to hear this message in audio format

ಇರಾನ್‌-ಇಸ್ರೇಲ್‌ ಯುದ್ಧ ಭೀತಿಯಿಂದ ದೇಶಾದ್ಯಂತ ಗ್ಯಾಸ್ ವಿತರಣೆ ಅಭಾವದ ಸಮಸ್ಯೆ ಎದುರಿಸರಲು ಹಾಗೂ ವಿದೇಶಿ ವಿನಿಮಯ ಉಳಿಸಲು ಹಾಗೂ ಸಮಸ್ಯೆ ಪರಿಹಾರಕ್ಕಾಗಿ ದೇಶಿಯ ಎಥೆನಾಲ್ ಉತ್ಪಾದನೆ ಹಾಗೂ ಮಾರಾಟಕ್ಕೆ ರೈತರಿಗೆ ಸರ್ಕಾರಗಳು ಉತ್ತೇಜನ ನೀಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ಈ ಕುರಿತು ಭಾನುವಾರ(ಮಾ.22) ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಗೆ ಪತ್ರ ಬರೆದಿರುವ ಅವರು, ಸಿಲಿಂಡರ್‌ಗಳನ್ನ ಪೂರೈಸುತ್ತೇವೆ ಎಂದು ಮನೆ ಮನೆಗೆ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸ್ಟವ್ ವಿವರಣೆ ಮಾಡಲಾಗಿತ್ತು. ಆದರೆ ಈಗ ಪೂರೈಕೆ ಕಡಿಮೆಯಾಗಿರುವುದರಿಂದ ಸಿಲಿಂಡರ್‌ ಇಲ್ಲದೆ ಜನರು ಆತಂಕಕ್ಕೀಡಾಗಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನು ಎಥೆನಾಲ್ ಉತ್ಪಾದನೆ ಮಾಡುವ ರೈತರಿಗೂ ನೀಡಬೇಕು. ಇದರಿಂದ ರೈತರ ಆದಾಯ ಹೆಚ್ಚುವುದರ ಜತೆಗೆ ದೇಶದ ಅನಿಲ ಕೊರತೆ ಕಡಿಮೆಯಾಗಿ ವಿದೇಶಿ ವಿನಿಮಯ ಹಣ ಉಳಿತಾಯವಾಗುತ್ತದೆ ಎಂದಿದ್ದಾರೆ.

ಎಲ್‌ಪಿಜಿ ಬಳಕೆಯಿಂದ ಸಿಲಿಂಡರ್ ಸಿಡಿಯುವ ಅಪಾಯವಿದೆ. ಆದರೆ ಎಥೆನಾಲ್‌ ಲಿಕ್ವಿಡ್ ಆದ ಕಾರಣ ಬೆಂಕಿ ಹತ್ತಿಕೊಳ್ಳುವ ಭಯ ಇರುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಿ. ಈ ಹಿಂದೆ ಸೀಮೆಣೆಯನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಜತೆಯಲ್ಲಿ ನೀಡುತ್ತಿದ್ದ ರೀತಿಯಲ್ಲಿಯೇ, ಗ್ರಾಹಕರಿಗೆ ಎಥೆನಾಲ್‌ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಉತ್ಪತಿಯಾಗುವ ಎಥೆನಾಲ್‌ ಪ್ರಮಾಣ

ಕರ್ನಾಟಕವು ಭಾರತದ ಪ್ರಮುಖ ಎಥೆನಾಲ್ ಉತ್ಪಾದಕ ರಾಜ್ಯವಾಗಿದ್ದು, 2024-25ರ ವೇಳೆಗೆ ವಾರ್ಷಿಕ ಸುಮಾರು 270 ಕೋಟಿ ಲೀಟರ್‌ಗಳಷ್ಟು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ರಾಜ್ಯದಲ್ಲಿ 33ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಮೊಲಾಸಿಸ್ ಆಧಾರಿತ ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿದ್ದು, ರಾಜ್ಯದ ಒಟ್ಟು ಸ್ಥಾಪಿತ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರಸ್ತುತ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಗುರಿಯನ್ನು ಸಾಧಿಸಲು ರಾಜ್ಯವು ಮಹತ್ವದ ಪಾತ್ರ ವಹಿಸುತ್ತಿದೆ.

ಪ್ರತೀ ದಿನ ಒಂದೇ ಕಾರ್ಖಾನೆಯಲ್ಲಿ 1.50 ಲಕ್ಷ ಲೀಟರ್‌ ಉತ್ಪಾದನೆ

ಚಿಕ್ಕೋಡಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಉತ್ತಮ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಪ್ರತಿದಿನ ಸರಾಸರಿ 1.50 ಲಕ್ಷ ಲೀ. ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 3.47 ಕೋಟಿ ಲೀ. ಎಥೆನಾಲ್ ಉತ್ಪಾದಿಸಲಾಗಿದೆ. ಇದರಲ್ಲಿ 189.55 ಕೋಟಿ ರೂ. ಮೌಲ್ಯದ ಸುಮಾರು 3.05 ಕೋಟಿ ಲೀ. ಎಥೆನಾಲ್ ವಿವಿಧ ತೈಲ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪೆಟ್ರೋಲಿಯಂ ಮತ್ತು ಇಂಧನ ಸಚಿವಾಲಯ ಮತ್ತು ಇತರೆ ಸರ್ಕಾರಿ ಕಚೇರಿಗಳ ಕಟ್ಟುನಿಟ್ಟಿನ ನಿಯಮಗಳಿಗೆ ಸಂಪೂರ್ಣವಾಗಿ ಅನುಗುಣವಾಗಿ ನಡೆಸಲಾಗುತ್ತಿದೆ. ಎಥೆನಾಲ್‌ವನ್ನು ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್, ಎಂಆರ್‌ಪಿಎಲ್ ನಂತಹ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ.

Read More
Next Story