Shortage of gas cylinder: Bangalores popular Deve Gowda Appaji Canteen temporarily closed
x
ಹನುಮಾನ್‌ ನಗರದಲ್ಲಿರುವ ಅಪ್ಪಾಜಿ ಕ್ಯಾಂಟಿನ್‌

ಗ್ಯಾಸ್ ಸಿಲಿಂಡರ್ ಕೊರತೆ: ಬೆಂಗಳೂರಿನ 'ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ತಾತ್ಕಾಲಿಕ ಬಂದ್

ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಸಮಸ್ಯೆಯಾಗಿರುವುದರಿಂದ ದೈನಂದಿನ ಅಡುಗೆ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಶಾಸಕ ಟಿ.ಎ. ಶರವಣ ತಿಳಿಸಿದ್ದಾರೆ.


Click the Play button to hear this message in audio format

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ, ಬಡವರ ಹಸಿವು ನೀಗಿಸುತ್ತಿದ್ದ 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಸಮಸ್ಯೆಯಾಗಿರುವುದರಿಂದ ದೈನಂದಿನ ಅಡುಗೆ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ, ಹೀಗಾಗಿ ಅನಿವಾರ್ಯವಾಗಿ ಕ್ಯಾಂಟೀನ್ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2017ರಿಂದ ಬಡವರ ಹಸಿವು ನೀಗಿಸುತ್ತಿದ್ದ ಅನ್ನದಾಸೋಹ

ಹಸಿದವರಿಗೆ, ನಿರ್ಗತಿಕರಿಗೆ ಹಾಗೂ ಶ್ರಮಿಕ ವರ್ಗದವರಿಗೆ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಮತ್ತು ತಿಂಡಿ ಒದಗಿಸುವ ಸದುದ್ದೇಶದಿಂದ 2017ರಲ್ಲಿ ಈ ಕ್ಯಾಂಟೀನ್ ಅನ್ನು ಆರಂಭಿಸಲಾಗಿತ್ತು. ಅಂದಿನಿಂದ ಇದು ಪ್ರತಿದಿನ ಸಾವಿರಾರು ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಮೂಲಕ ಬಡವರ ಪಾಲಿನ ಆಸರೆಯಾಗಿತ್ತು.

ಮರುಪ್ರಾರಂಭದ ಭರವಸೆ

ಇದು ಶಾಶ್ವತ ಸ್ಥಗಿತವಲ್ಲ ಎಂದು ಸ್ಪಷ್ಟಪಡಿಸಿರುವ ಶರವಣ ಅವರು, ಗ್ಯಾಸ್ ಸಿಲಿಂಡರ್ ಪೂರೈಕೆಯ ಸಮಸ್ಯೆಯು ಬಗೆಹರಿದು ಯಥಾಸ್ಥಿತಿಗೆ ಮರಳಿದ ತಕ್ಷಣವೇ ಕ್ಯಾಂಟೀನ್ ಅನ್ನು ಎಂದಿನಂತೆ ಮರುಪ್ರಾರಂಭಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

Read More
Next Story