
ಮೈಕೇಲ್ ಜಾಕ್ಸನ್ ಬಯೋಪಿಕ್ ನೋಡಿ ಭಾವುಕರಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಮೈಕೆಲ್ ಜಾಕ್ಸನ್ ಬಯೋಪಿಕ್ ನೋಡಿ ಭಾವುಕರಾದ ರಾಮ್ ಗೋಪಾಲ್ ವರ್ಮಾ
ಮೈಕೆಲ್ ಜಾಕ್ಸನ್ ಜಾಕ್ಸನ್ ಬಯೋಪಿಕ್ ನೋಡಿ ಭಾವುಕ ಪತ್ರ ಬರೆದ ಆರ್‌ಜಿವಿ; ಪಾಪ್ ಐಕಾನ್ ಸಾವು ತಂದ ಆಘಾತ ಹಾಗೂ ತಮ್ಮ ಅಪಾರ ಪ್ರೀತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ನಿರ್ದೇಶಕ.
ಖ್ಯಾತ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾಅವರು ಪಾಪ್ ಸಾಮ್ರಾಜ್ಯದ ದಿಕ್ಸೂಚಿ ಮೈಕೆಲ್ ಜಾಕ್ಸನ್ ಜಾಕ್ಸನ್ ಅವರ ಬಯೋಪಿಕ್ ‘ಮೈಕೆಲ್ ಜಾಕ್ಸನ್’ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಮೈಕೆಲ್ ಜಾಕ್ಸನ್ ಜಾಕ್ಸನ್ ಮೇಲಿನ ತಮ್ಮ ಅಪಾರ ಪ್ರೀತಿ ಹಾಗೂ ಅವರು ಇಷ್ಟು ಬೇಗ ಜಗತ್ತನ್ನು ತೊರೆದಿದ್ದಕ್ಕೆ ಇರುವ ಆಕ್ರೋಶವನ್ನು ವರ್ಮಾ ತಮ್ಮದೇ ಶೈಲಿಯಲ್ಲಿ ಹೊರಹಾಕಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಬರಹ ಹಂಚಿಕೊಂಡಿರುವ ಆರ್‌ಜಿವಿ, "ಮೈಕೆಲ್ ಜಾಕ್ಸನ್ ಸಿನಿಮಾ ನೋಡಿದ ನಂತರ ನನ್ನ ನೆನಪುಗಳು 2009ರ ಜೂನ್ 25ರ ಆ ಕರಾಳ ದಿನಕ್ಕೆ ಕರೆದೊಯ್ದವು. ಅಂದು ಬೆಳಗ್ಗೆ ಎದ್ದಾಗ ಟಿವಿ ಪರದೆಯ ಮೇಲೆ ‘ಮೈಕೆಲ್ ಜಾಕ್ಸನ್ ಜಾಕ್ಸನ್ ನಿಧನ’ ಎಂಬ ಕಪ್ಪು ಅಕ್ಷರಗಳನ್ನು ನೋಡಿ ನನಗೆ ಶಾಕ್ ಆಗಿತ್ತು. ಅದೊಂದು ದುಸ್ವಪ್ನ ಇರಬಹುದು ಎಂದುಕೊಂಡು ಚಾನೆಲ್‌ಗಳನ್ನು ಬದಲಾಯಿಸಿದೆ. ಆದರೆ ಎಲ್ಲೆಡೆ ಅದೇ ಕಹಿ ಸುದ್ಧಿ ಬಿತ್ತರವಾಗುತ್ತಿತ್ತು. ಅಸಾಧ್ಯವಾದದ್ದು ಸಂಭವಿಸಿತ್ತು" ಎಂದು ಆ ದಿನದ ಆಘಾತವನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ಕಾಲೇಜು ದಿನಗಳ ನೆನಪನ್ನು ಮೆಲುಕು ಹಾಕಿರುವ ಅವರು, "1984ರಲ್ಲಿ ವಿಜಯವಾಡದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ, ನನ್ನ ಸ್ನೇಹಿತ ನನ್ನನ್ನು ಸಣ್ಣ ವಿಡಿಯೋ ಪಾರ್ಲರ್‌ಗೆ ಕರೆದೊಯ್ದು ಮೈಕೆಲ್ ಜಾಕ್ಸನ್ ಜಾಕ್ಸನ್ ಅವರ ‘ಥ್ರಿಲ್ಲರ್’ ಸಾಂಗ್ ತೋರಿಸಿದ್ದ. ಆ ಹಾಡು ಮತ್ತು ಅವರ ನೃತ್ಯ ನನ್ನ ಕಣ್ಣುಗಳನ್ನು ಸಂಪೂರ್ಣವಾಗಿ ತೆರೆಸಿತು. ಅವರು ಮನುಷ್ಯನಂತೆ ನೃತ್ಯ ಮಾಡುತ್ತಿರಲಿಲ್ಲ, ಬದಲಿಗೆ ದೈವಿಕ ಶಕ್ತಿಯಂತೆ ಪರದೆಯನ್ನು ಆಳುತ್ತಿದ್ದರು. ಅಂದಿನಿಂದ ಜಾಕ್ಸನ್ ಅವರ ಪ್ರತಿಯೊಂದು ವಿಡಿಯೋಗಳು ನನ್ನ ಸಿನಿಮಾ ನಿರ್ದೇಶನದ ಚರ್ಚೆಗಳಲ್ಲಿ ಮುಖ್ಯ ಪ್ರೇರಣೆಯಾಗಿದ್ದವು. ಅವರ ಕೆಲಸ ನಮ್ಮೆಲ್ಲರಿಗೂ ತಲುಪಲಾಗದ ಒಂದು ಮಾನದಂಡವಾಗಿತ್ತು" ಎಂದು ಕೊಂಡಾಡಿದ್ದಾರೆ.
ಮೈಕೆಲ್ ಜಾಕ್ಸನ್ಜಾಕ್ಸನ್ ನಿಧನದ ಬಗ್ಗೆ ಬೇಸರ ವ್ಯಕ್ತಪಡಿಸಿದ ವರ್ಮಾ, "ಮೈಕೆಲ್ ಜಾಕ್ಸನ್ ಜಾಕ್ಸನ್ ಸತ್ತಿದ್ದಕ್ಕಾಗಿ ನನಗೆ ಅವರ ಮೇಲೆ ದ್ವೇಷವಿದೆ. ಅವರು ಕೂಡ ನಮ್ಮಂತೆಯೇ ರಕ್ತ, ಮಾಂಸ ಮತ್ತು ಆಮ್ಲಜನಕದ ಅಗತ್ಯವಿರುವ ಸಾಮಾನ್ಯ ಮನುಷ್ಯ ಎಂದು ಸಾಬೀತುಪಡಿಸಿದ್ದಕ್ಕಾಗಿ ನನಗೆ ಕೋಪವಿದೆ. ಸಿಎನ್‌ಎನ್ ವಾಹಿನಿಯಲ್ಲಿ ‘ಮೈಕೆಲ್ ಜಾಕ್ಸನ್ಜಾಕ್ಸನ್ ಶವವನ್ನು ಶವಾಗಾರಕ್ಕೆ ಕಳುಹಿಸಲಾಗಿದೆ’ ಎಂಬ ಸಾಲುಗಳನ್ನು ನೋಡುವವರೆಗೂ ನಾನು ಬದುಕಿರಬಾರದಿತ್ತು. ಅವರು ನನ್ನ ಕಲ್ಪನಾ ಲೋಕಕ್ಕೆ ದ್ರೋಹ ಬಗೆದು ನಶ್ವರರಾದರು. ನನ್ನ ಸುಂದರ ಕನಸನ್ನು ದುಸ್ವಪ್ನವಾಗಿ ಬದಲಾಯಿಸಿದ್ದಕ್ಕಾಗಿ ನಾನು ಅವರನ್ನು ದ್ವೇಷಿಸುತ್ತೇನೆ, ಆದರೆ ಅಷ್ಟೇ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಜಾಕ್ಸನ್ ಅವರ ಸುತ್ತಲಿದ್ದ ವಿವಾದಗಳು ತಮಗೆ ಎಂದಿಗೂ ಮುಖ್ಯ ಎನಿಸಲಿಲ್ಲ ಎಂದಿರುವ ಆರ್‌ಜಿವಿ, ಅವರು ಭೂಮಿಯ ಮೇಲಿನ ದೇವರ ವಿಶೇಷ ಸೃಷ್ಟಿಯಾಗಿದ್ದರು ಎಂದು ಹೇಳಿದ್ದಾರೆ. ಸದ್ಯ ಆರ್‌ಜಿವಿ ಅವರ ಈ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೈಕೆಲ್ ಜಾಕ್ಸನ್ ಜಾಕ್ಸನ್ ಅಭಿಮಾನಿಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.

